ಯಲ್ಲಾಪುರ: ಗುರುವಾರ ಪ್ರಕಟಗೊಂಡ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಯಲ್ಲಾಪುರ ಪಟ್ಟಣದ ವಾಯ್.ಟಿ.ಎಸ್.ಎಸ್. ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಈ ಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಪ್ರಶಾಂತ ಹೆಗಡೆ 625 ಕ್ಕೆ 619 (99.04%) ಅಂಕ ಗಳಿಸಿ ಶಾಲೆಗೆ ಪ್ರಥಮ, ರಾಜ್ಯಕ್ಕೆ 7ನೇ ಸ್ಥಾನ, ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈ ಶಾಲೆಯ ನಿಧಿ ಓಂಕಾರ ಭಟ್ಟ 625 ಕ್ಕೆ 610 (97.6%) ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ, ಸಾಯಿರಾಮ ವಿಠ್ಠು ದೊಹಿಪುಡೆ 625 ಕ್ಕೆ 607 (97.12%) ಗಳಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಶ್ರಾವ್ಯಾ ಆನಂದ ಕವಡಿಕೆರೆ 606 (96.96%), ನೀರಜ ಸದಾನಂದ ನಾಯ್ಕ 603(96.48%), ಅಪೇಕ್ಷಾ ಮಂಜುನಾಥ ಭಟ್ಟ 603(96.48%), ಕೃಷ್ಣವೇಣಿ ಕಮಲಾಕರ ನಾಯ್ಕ 601 (96.16%), ಸಮರ್ಥ ಮಾರುತಿ ಕಳಸೂರಕರ್ 590 (94.40%), ವಿಜೇತಾ ಜಿ 586(93.76%), ಜಯಶ್ರೀ ತುಕಾರಾಮ ನಾಯ್ಕ 585(93.60%), ನಿರೀಕ್ಷಾ ಸಂತೋಷ ನಾಯಕ 581(92.96%), ದೀಕ್ಷೀತಾ ರಾಜಶೇಖರ ಭಟ್ಟ 573(91.68%), ಅಯಾನ್ ಚಾಂದಸಾಬ ಧಾರವಾಡ 572 (91.52%) ಮಾನ್ಯ ಶಿವರಾಮ ಭಟ್ಟ 572 (91.52%), ಮಹಮ್ಮದ ಅರಫಾದ ಮುಜಫರ್ ಶೇಖ್ 570(91.20%), ನಂದನ ನಾರಾಯಣ ನಾಯರ್ 565 (90.40%) ಅಂಕಗಳನ್ನು ಪಡೆದಿದ್ದಾರೆ.

ಪರೀಕ್ಷೆ ಬರೆದ 50 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರವಿಕುಮಾರ ಲಕ್ಷ್ಮಣ ಶಾನಭಾಗ, ಉಪಾಧ್ಯಕ್ಷ ಪ್ರಸನ್ನ ಗುಡಿಗಾರ, ಕಾಯದರ್ಶಿ ರಾಜೇಂದ್ರ ಪ್ರಸಾದ ಬಿ. ಭಟ್ಟ ಹಾಗೂ ಆಡಳಿತ ಮಂಡಳಿ ಎಲ್ಲಾ ಸದಸ್ಯರು, ಪ್ರಾಂಶುಪಾಲ ಆನಂದ ಹೆಗಡೆ, ಮುಖ್ಯಾಧ್ಯಾಪಕಿ ಶೈಲಜಾ ಮಾಪ್ಸೇಕರ್ ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading