ಇದೇ ಮೊದಲ ಬಾರಿಗೆ ಯಲ್ಲಾಪುರ ಪಟ್ಟಣದಲ್ಲಿ ವಿಶೇಷವಾದ ಹಲಸು ಮೇಳವನ್ನು ಆಯೋಜಿಸಲಾಗಿದೆ. ಗಜಮುಖ ಇವೆಂಟ್ಸ್ ನವರು ಈ ಹಲಸು ಮೇಳವನ್ನು ಆಯೋಜಿಸಿದ್ದಾರೆ.

ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ಗುರುವಾರ, ಶುಕ್ರವಾರ, ಶನಿವಾರ ಹಲಸು ಮೇಳ ನಡೆಯಲಿದೆ. ಈ ಮೂರೂ ದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಲಸು ಮೇಳ ನಡೆಯಲಿದೆ.

ಗುರುವಾರ ಹಲಸು ಮೇಳವನ್ನು ಉದ್ಯಮಿ ಬಾಲಕೃಷ್ಣ ನಾಯಕ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ.

ಹಲಸು ಮೇಳದ ಸಂಘಟಕರಾದ ದೀಪಕ ಶೆಣೈ ಮತ್ತು ರಮೇಶ ಶಿವಮೊಗ್ಗ

ಯಲ್ಲಾಪುರದಲ್ಲಿ ನಡೆಯುವ ಹಲಸು ಮೇಳದಲ್ಲಿ ಹಲಸಿನ ಹಣ್ಣಿನಿಂದ ತಯಾರಿಸಿದ ಜಿಲೇಬಿ, ಹೋಳಿಗೆ, ಮಣ್ಣಿ, ಮುಳ್ಕ, ಉಪ್ಪಿನಕಾಯಿ ಹಾಗೂ ಹಲಸಿನ ಹಣ್ಣಿನ ವಿವಿಧ ಖಾದ್ಯಗಳು ದೊರೆಯುತ್ತವೆ. ಸ್ಥಳದಲ್ಲಿಯೇ ಇವುಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತದೆ.

ರಾಜ್ಯದ ವಿವಿಧ ಭಾಗಗಳ ವಿವಿಧ ತಳಿಯ ಹಲಸಿನ ಹಣ್ಣುಗಳು ಸಹ ಲಭ್ಯ ಇರಲಿವೆ. ಹಲಸಿನ ಗಿಡಗಳು, ಮಾವಿನ ಗಿಡಗಳು, ಹೂವಿನ ಗಿಡಗಳು ಸಿಗುತ್ತವೆ. ವಿವಿಧ ತಳಿಯ ಮಾವಿನ ಹಣ್ಣುಗಳು, ತರಕಾರಿ ಬೀಜಗಳು ಮತ್ತು ವಿಶೇಷವಾಗಿ ತಯಾರಕರಿಂದಲೇ ಪೂರೈಕೆಯಾಗುವ ವಿವಿಧ ಸ್ವದೇಶಿ ಉತ್ಪನ್ನಗಳು ಸಹ ಲಭ್ಯ ಇರುತ್ತವೆ ಎಂದು ಹಲಸು ಮೇಳದ ಸಂಘಟಕ ದೀಪಕ ಶೆಣೈ ಮತ್ತು ರಮೇಶ ಶಿವಮೊಗ್ಗ ತಿಳಿಸಿದ್ದಾರೆ.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading