ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಮಗುವಿನ ಚಿಕಿತ್ಸೆಗೆ ಯಲ್ಲಾಪುರ ಪಟ್ಟಣದ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗವು ನೆರವು ನೀಡಿ ಮಾನವೀಯತೆ ಮೆರೆದಿದೆ.

ಕಾಳಮ್ಮನಗರದ ತಂತ್ರಜ್ಞರ ಬಳಗದ ಸದಸ್ಯ ಮೆಕಾನಿಕ್ ಮುನ್ನಾ ಇವರ ಪುಟ್ಟ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಇವಳ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ ರವಿವಾರ ಪಟ್ಟಣದ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗ ಪ್ರಮುಖರು ಧನ ಸಹಾಯ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಯಲ್ಲಾಪುರ ತಂತ್ರಜ್ಞರ ಬಳಗದ ಮುಖ್ಯಸ್ಥರಾದ ಮಧುಕೇಶವ ಭಾಗ್ವತ್, ಗ್ಯಾರೇಜ್ ಮೂರ್ತಿ, ಪ್ರಕಾಶ್ ಮೇಸ್ತ್ರಿ, ದೀಪಕ ಮರಾಠಿ, ಅನಿಲ್ ದೇಶಭಂಡಾರಿ ಮುಂತಾದವರು ಇದ್ದರು.

ಯಲ್ಲಾಪುರ ದ್ವಿಚಕ್ರ ವಾಹನಗಳ ತಂತ್ರಜ್ಞರ ಬಳಗದವರು ಈಹಿಂದೆಯೂ ಅನೇಕ ಸಾಮಾಜಿಕ ಕಾರ್ಯಗಳನ್ನು ಹಾಗೂ ಅಶಕ್ತರಿಗೆ ನೆರವು ನೀಡುವ ಮಾದರಿ ಕೆಲಸಗಳನ್ನು ಮಾಡಿದ್ದಾರೆ.

=================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading