ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿಯೊಂದು ಚವತ್ತಿ ಸಮೀಪ ರಸ್ತೆ ಅಂಚಿನಲ್ಲಿ ಗುರುವಾರ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಲಾರಿ ಚಾಲಕನು ಲಾರಿಯ ಅಡಿಯಲ್ಲಿ ಸಿಲುಕಿ ಒದ್ದಾಡುವಂತಾಯಿತು.

ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನು ನೋವಿನಿಂದ ನರಳುತ್ತಿದ್ದನು. ಇದನ್ನು ಕಂಡ ಸ್ಥಳೀಯರು ಮಂಚಿಕೇರಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮೂರು ಗಂಟೆಗಳ ಕಾಲ ಲಾರಿ ಅಡಿಯಲ್ಲಿ ಸಿಲುಕಿದ್ದ ಚಾಲಕನನ್ನು ಮಂಚಿಕೇರಿ ಪೋಲಿಸ್ ಹೊರ ಠಾಣೆಯ ಹವಾಲ್ದಾರ ದೀಪಕ್ ನಾಯ್ಕ ಅವರ ತಂಡ ಹಾಗೂ ಉಮ್ಮಚಗಿಯ ಆನಂದ ಭೋವಿವಡ್ಡರ್, ನಿತಿನ್ ನಾಯ್ಕ, ವಸಂತ ನಾಯ್ಕ, ಭರತ ನಾಯ್ಕ, ಸುಮಂತ ಮತ್ತು ಸ್ಥಳೀಯರು ಹೊರತೆಗೆದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

========================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading