ಯಲ್ಲಾಪುರ ತಾಲೂಕಿನ ನಂದೊಳ್ಳಿ ಸಮೀಪದ ಸೂಳಗಾರಿನಲ್ಲಿ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಶಾಸಕ ಶಿವರಾಮ ಹೆಬ್ಬಾರ ಭಾಗವಹಿಸಿದರು.

ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಇಂತದ ಶಿಬಿರಗಳು ಮಕ್ಕಳಿಗೆ ನಮ್ಮ ಸನಾತನ ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಆಚರಣೆಗಳನ್ನು ಕಲಿಸುತ್ತವೆ. ಇಲ್ಲಿ ಕಲಿತ ವಿದ್ಯೆಯನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದರು. ಪ್ರತಿಷ್ಠಾನದ ಕಟ್ಟಡಕ್ಕೆ ಈಗಾಗಲೇ 7 ಲಕ್ಷ ರೂ ಅನುದಾನ ನೀಡಲಾಗಿದೆ. ಕಟ್ಟಡದ ಇನ್ನುಳಿದ ಕಾಮಗಾರಿಗೆ ಅಗತ್ಯ ನೆರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದೆಂದು ಅವರು ಭರವಸೆ ನೀಡಿದರು.

ಪ್ರತಿಷ್ಠಾನದ ಅಧ್ಯಕ್ಷ ವಿ.ಟಿ.ಹೆಗಡೆ, ಪ್ರಮುಖರಾದ ನಾರಾಯಣ ಭಟ್ಟ ಸೂಳಗಾರ, ತಿಮ್ಮಣ್ಣ ಭಟ್ಟ ಸೂಳಗಾರ, ನಂದೊಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಟಿ.ವಿ.ಭಾಗ್ವತ, ಎಲ್.ಎಸ್.ಎಂ.ಪಿ ಸೊಸೈಟಿ ಉಪಾಧ್ಯಕ್ಷ ಟಿ.ಆರ್ ಹೆಗಡೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್ ಭಟ್ಟ, ಪ್ರಮುಖರಾದ ತಮ್ಮಣ್ಣ ಕವಡಿಕೆರೆ, ಚಂದ್ರಶೇಖರ ಕಂಚಿನಮನೆ ಮುಂತಾದವರು ಇದ್ದರು.

======

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading