ಶಾಸಕ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಯಲ್ಲಾಪುರ ತಾಲೂಕಿನ ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸೂರ, ಹುಣಶೆಟ್ಟಿಕೊಪ್ಪ ಹಾಗೂ ಹುಲಗೋಡ ಗ್ರಾಮಗಳಲ್ಲಿ ಎಸ್.ಐ.ಆರ್. (ವಿಶೇಷ ಮತದಾರರ ತೀವ್ರ ಪರಿಷ್ಕರಣೆ) ಕುರಿತು ಜಾಗೃತಿ ಸಭೆಗಳನ್ನು ನಡೆಸಿದರು.

ಸಭೆಗಳಲ್ಲಿ ಎಸ್.ಐ.ಆರ್. ಪ್ರಕ್ರಿಯೆಯ ಮಹತ್ವ, ಮತದಾರರ ಪಟ್ಟಿಯ ಪರಿಷ್ಕರಣೆ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾರರ ಜಾಗೃತಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಹಾಗೂ ಮುಖಂಡರು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಶಾಸಕ ಶಿವರಾಮ ಹೆಬ್ಬಾರ್ ಕರೆ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜಯ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್.ಐ.ಆರ್. ಬ್ಲಾಕ್ ಉಸ್ತುವಾರಿ ಎನ್.ಕೆ. ಭಟ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು

ಶಿರಸಿ: ಮಿಥುನ್ ಎನ್ನುವ ಬಾಲಕನು ವೈದ್ಯರ ನಿರ್ಲಕ್ಷದಿಂದ ಸಾವನಪ್ಪಿದಕ್ಕೆ ಸರಕಾರಿ ಅಸ್ಪತ್ರೆ ಎಲ್ಲಾ ಸಿಬ್ಬಂದಿಗಳು ಸೇರಿ ಅಥವಾ ಸರಕಾರದಿಂದ 25 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಬನವಾಸಿ ಬಿಜೆಪಿ ಮಂಡಲದ ಅಧ್ಯಕ್ಷರಾದ ರಮೇಶ ನಾಯ್ಕ ಕುಪ್ಪಳ್ಳಿ ಅವರು ಹೇಳಿದರು.

ಅವರು ಬನವಾಸಿಯ ಸಹಸ್ರಳ್ಳಿಯ ಮಿಥುನ್ ಪುಟ್ಟಪ್ಪ ನಾಯ್ಕ ಎನ್ನುವ ಬಾಲಕನಿಗೆ ಹಾವು ಕಚ್ಚಿದ ವೇಳೆ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ವೈದ್ಯರ ನಿರ್ಲಕ್ಷದಿಂದ ಸಾವನಪ್ಪಿದ್ದು, ಮೃತ ಬಾಲಕ ಸಾವಿಗೆ ನ್ಯಾಯಕ್ಕಾಗಿ ಬಿಜೆಪಿ ಬನವಾಸಿ ಮಂಡಲ ಹಾಗೂ ಬಿಜೆಪಿ ರೈತ ಮೋರ್ಚಾ ವತಿಯಿಂದ ಮಂಗಳವಾರ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆಯ ಉದ್ದೇಶಿಸಿ ಅವರು ಮಾತನಾಡಿದರು. ಕಳೆದ 3 ವರ್ಷದಿಂದ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರ ಅವೈಜ್ಞಾನಿಕವಾಗಿ ಗ್ಯಾರಂಟಿ ತರುವ ಮೂಲಕ ಉಳಿದ ಎಲ್ಲಾ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ರಾಜ್ಯ ಸರಕಾರ ಕೆವಲ ಹಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದೆ ಆರೋಪಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಮಾತನಾಡಿ ಶಾಸಕರಾದ ಭೀಮಣ್ಣ ನಾಯ್ಕ ಅವರು ತಮ್ಮ ವ್ಯಾಪ್ತಿಯ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಕಾರಣ ಮಿಥುನ್ ನಾಯ್ಕ ಎನ್ನುವ ಬಾಲಕನ ಸಾವು ಆದರೂ ಕೂಡಾ ಕನಿಷ್ಠ ಪಕ್ಷ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳುವ ಕೆಲಸ ಮಾಡಿಲ್ಲ, ಆಸ್ಪತ್ರೆಯಲ್ಲಿ ಈ ಘಟನೆಯ ಬಗ್ಗೆ ವಿಚಾರಿಸಿಲ್ಲ, ರಕ್ಷಾ ಸಭೆಯಲ್ಲಿಯೂ ಕೂಡಾ ಚಕಾರವೆತ್ತಿಲ್ಲ, ಜನರ ಸಾವಾದರೂ ಕೂಡಾ ತಾವು ಸ್ಪಂದಿಸುತ್ತಿಲ್ಲ. ಕೂಡಲೇ ಮೃತನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಆಗ್ರಹಿಸಿದರು.

ಸಿದ್ದಾಪುರ ಬಿಜೆಪಿ ಮಂಡಲಾಧ್ಯಕ್ಷರಾದ ತಿಮ್ಮಪ್ಪ ಎಂ.ಕೆ, ಸತ್ಯವತಿ ನಾಯ್ಕ, ದಿ. ಮಿಥುನ್ ನಾಯ್ಕ ಅವರ ತಂದೆ ಪುಟ್ಟಪ್ಪ ನಾಯ್ಕ ಬನವಾಸಿ ಮುಖಂಡ ಯುವರಾಜ ಗೌಡಎಸ್,ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಬೋರ್ಕರ್ ಮಾತನಾಡಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಧ್ಯಕ್ಷರಾದ ಪ್ರೇಮಕುಮಾರ ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಎಲ್.ಟಿ.ಪಾಟೀಲ್, ಬನವಾಸಿ ಮಂಡಲದ ಉಪಾಧ್ಯಕ್ಷರಾದ ರಾಘವೇಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಗೌಡ, ಮಂಜುನಾಥ ನಾಯ್ಕ, ಗಣಪತಿ ಹೆಗಡೆ ಕಬ್ಬಿನಮನೆ, ರಾಘವೇಂದ್ರ ದೇವಾಡಿಗ, ರೈತಮೋರ್ಚಾ ಉಪಾಧ್ಯಕ್ಷರಾದ ಸುರೇಶ ನಾಯ್ಕ ಕಾನಗೋಡ, ನಾರಾಯಣ ಹೆಗಡೆ ಮತ್ತಿಗಟ್ಟ, ರವಿ ಗಾಂವಕರ, ಲಕ್ಷ್ಮೀ ಕಾನಡೆ, ಮಣಿ ಪಾಟೀಲ್, ನಾರಾಯಣ ಗೌಡ, ವಸಂತ ಗೌಡ, ಮಹೇಂದ್ರ ಭಟ್ ಬಿಸಲಕೊಪ್ಪ, ಬನವಾಸಿ, ಶಿರಸಿ, ಸಿದ್ದಾಪುರದ ಹಲವಾರು ಬಿಜೆಪಿ ಕಾರ್ಯಕರ್ತರ ಇದ್ದರು, ವಿ.ಎಮ್ ಹೆಗಡೆ ಸ್ವಾಗತಿಸಿದರು.

ಯಲ್ಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳವಾರ ತಾಲೂಕಿನ ಸವಣಗೇರಿ ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವಯಕ್ತಿಕ ನಿಂದನೆ, ವ್ಯಕ್ತಿಗತ ತೇಜೋವಧೆ ಸಲ್ಲ. ಸಮಾಜಕ್ಕೆ, ನಾಡಿನ ಅಭಿವೃದ್ಧಿಗೆ ಪೂರಕವಾದ ವರದಿಗಳು ಓದುಗರ ಮನವನ್ನು ಗೆಲ್ಲಬಲ್ಲವು. ಸಮಷ್ಟಿಗೆ ಪೂರಕವಾದ ವರದಿಗಳು ಗೌರವ ತಂದುಕೊಡುತ್ತವೆ. ನಾನಾ ಕಾರಣಗಳಿಂದ ರಾಜಕೀಯ ಕ್ಷೇತ್ರ, ಮಾಧ್ಯಮ ಕ್ಷೇತ್ರ ಹಿಂದಿನಂತೇ ಇಂದು ಮೌಲ್ಯಗಳನ್ನು ಉಳಿಸಿಕೊಂಡಿಲ್ಲ ಎಂದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಅಭಿನಂದನಾ ನುಡಿಗಳನ್ನಾಡಿದರು. ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಸಂವಾದ ನಡೆಸಿಕೊಟ್ಟರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ, ಪ್ರಮುಖರಾದ ಎ.ಎ.ಶೇಖ್, ಶೇಷಗಿರಿ ಪ್ರಭು, ಶಿಲ್ಪಾ ನಾಯ್ಕ, ಗೋಪಾಲಕೃಷ್ಣ ಭಟ್ಟ, ಪ್ರಭಾವತಿ ಗೋವಿ ಮುಂತಾದವರು ಇದ್ದರು. ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಕೆ.ಎಸ್.ಭಟ್ಟ, ನಾಗೇಂದ್ರ ಯಲ್ಲಾಪುರ, ನರಸಿಂಹ ಸಾತೊಡ್ಡಿ,ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಶ್ರೀಧರ ಅಣಲಗಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ದತ್ತಾತ್ರೇಯ ಕಣ್ಣಿಪಾಲ ನಿರ್ವಹಿಸಿದರು. ಕಾರ್ಯದರ್ಶಿ ವಿಜಯ ಕುಮಾರ ನಾಯ್ಕ ವಂದಿಸಿದರು.

ವಿದ್ಯೆಯಿಂದ ವಿನಯ ಅದರಿಂದ ಜೀವನದ ಪರೀಕ್ಷೆಯಲ್ಲಿ ಸಫಲತೆ ಗಳಿಸಬೇಕು ಎಂದು ಶ್ರೀಮಾತಾ ಪಾಠಶಾಲೆ ಉಮ್ಮಚಗಿಯ ಉಪನ್ಯಾಸಕ ಮಹೇಶ ಭಟ್ ಹೇಳಿದರು.

ಯಲ್ಲಾಪುರದ ವಿಶ್ವದರ್ಶನ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೀವನದ ಬಹಳಮುಖ್ಯವಾದ ಘಟ್ಟದಲ್ಲಿ ನಿಮ್ಮ ಪ್ರಯಾಣ ಸಾಗುತ್ತಿದೆ. ಕಲಿಕೆಯೊಂದಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯೊಂದಿಗಿನ ಶಿಕ್ಷಣ ಬೇಕು. ವಿದ್ಯೆಯಿಂದ ಪಡೆಯಬೇಕಾಗಿದ್ದು ವಿನಯ. ಅದರಿಂದ ಸಮಾಜದಲ್ಲಿ ಗುರುತಿಸಲ್ಪಟ್ಟು ಉತ್ತಮ ಜೀವನ ಸಾಗಿಸಬೇಕು. ನಾವು ಸತ್ಪುರಷರಾಗಿ ಬದುಕಬೇಕು. ನಮ್ಮ ಪುರಾಣ ಇತಿಹಾಸಗಳಿಂದ ಆದರ್ಶ ಚಿಂತನೆಗಳನ್ನು ಪಡೆಯಬೇಕು.

ವಿದ್ಯೆಯಿಂದ ವಿನಯ ಬರದೇ ಹೊದರೇ ಜೀವನ ಪರಿಕ್ಷೆಗಳಲ್ಲಿ ಸಫಲತೆ ಕಷ್ಟ. ಹಿರಿಯರ ಗೌರವಿಸುವ ಚಿಂತನೆ ನಮಲ್ಲಿರಬೇಕು. ಸಂಸತ್ತು ಎಂದರೆ ಮುನ್ನಡೆಸುವುದು ಮತ್ತು ರಕ್ಷಿಸುವುದು ಎಂದರ್ಥ. ನಿಮ್ಮ ವಿದ್ಯಾರ್ಜನೆಯೊಂದಿಗೆ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆಸಬೇಕಿದೆ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಶೈಕ್ಷಣಿಕ ವಿಭಾಗ ಮುಖ್ಯಸ್ಥ ಡಾ. ಡಿ.ಕೆ. ಗಾಂವ್ಕರ್ ಮಾತನಾಡಿ ವಿಶ್ವದರ್ಶನದ ಕಾರ್ಯಕ್ರಮದ ಹಿಂದಿರುವುದು ಸಂಸ್ಕಾರ ಮತ್ತು ಸಂಸ್ಕೃತಿ. ಒಳ್ಳೆಯ ಸಂಗತಿಗಳ ಪಾಲನೆ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸುತ್ತೇವೆ. ಮುಂದೆ ದೇಶದ ಪ್ರತಿನಿಧಿಗಳ ಆಯ್ಕೆ ಮಾಡುವ ಅವಕಾಶ ನಿಮ್ಮದಾಗುತ್ತದೆ. ಸುಸಂಸ್ಕೃತ ಪ್ರಜೆಗಳಿಲ್ಲದೇ ಹೋದರೆ ಶ್ರೇಷ್ಠರಲ್ಲದವರ ಆಯ್ಕೆಯ ಮೂಲಕ ದೇಶಕ್ಕೆ ಹಾನಿಯಾಗುವಂತಹ ಸಂಭವವಿರುತ್ತದೆ. ಈ ಕುರಿತು ಅರಿವು ಮೂಡಿಸಲು ಶಾಲೆಯಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಕಾವ್ಯ ಹೆಗಡೆ ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರೆ, ಪ್ರಾಂಶುಪಾಲ ನಾಗರಾಜ ಹೆಗಡೆ ಸ್ವಾಗತಿಸಿದರು, ಉಪ ಪ್ರಾಂಶುಪಾಲ ವಿನಾಯಕ ಭಟ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

.

=============

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading