ವೇದಗಳೇ ಮೂಲ ಬೇರಾಗಿರುವ ಸನಾತನ ಧರ್ಮವನ್ನು ನಾಶಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿದ್ವಾನ್ ವಾಸುದೇವ ಭಟ್ಟ ಹಂದಲಸು ಹೇಳಿದರು.

ಅವರು ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವತ ಸಪ್ತಾಹ ಯಜ್ಞದಲ್ಲಿ ಪ್ರವಚನ ನೀಡಿದರು.

ಇದನ್ನೂ ಓದಿ: ಶಕ್ತಿಗಣಪತಿ ದೇವಾಲಯದಲ್ಲಿ ಕಾರ್ತಿಕೋತ್ಸವ, ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

ಸರಸ್ವತಿ-ಬ್ರಹ್ಮರಿಗೆ ನೀಡಿದ ಮಾತಿನಂತೆ ವಿಷ್ಣುವೇ ಕೃಷ್ಣನಾಗಿ ಅವತರಿಸಿದ ಕಥಾಭಾಗವನ್ನು ಅವರು ಪ್ರಸ್ತುತಪಡಿಸಿದರು. ವೈದಿಕರಿಂದ ಭಾಗವತದ ಮೂಲಗ್ರಂಥ ಪಾರಾಯಣ, ವೇದ ಪಾರಾಯಣ ನಡೆಯಿತು.

ಗೋಪಾಲಕೃಷ್ಣ ದೇವರಿಗೆ ವಿಷೇಷ ಪೂಜೆ, ಪುರುಷಸೂಕ್ತಪೂರ್ವಕ ಕ್ಷೀರಾಭಿಷೇಕ ನಡೆಯಿತು. ಲಕ್ಷ್ಮೀ ಹಾಗೂ ಗೋಪಾಲಕೃಷ್ಣ ಭಟ್ಟ ದಂಪತಿ ಪೂಜೆ ನೆರವೇರಿಸಿದರು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading