ಹೊನ್ನಾವರ ತಾಲೂಕಿನ ಕಾಸರಕೋಡ ಪಂಚಾಯತ ಬಟ್ಟೆ ವಿನಾಯಕಕೇರಿಯಲ್ಲಿ ಮನೆಯ ಬಳಿಯಿಂದ ಹಾದು ಹೋಗಿದ್ದ ವಿದ್ಯುತ್ ಲೈನ್ ಹರಿದು ಬಿದ್ದ ಪರಿಣಾಮ ಸಂತೋಷ ಗೌಡ ಎನ್ನುವವರು ಮೃತಪಟ್ಟಿದ್ದು ಅವರ ರಕ್ಷಣೆಗೆಂದು ಹೋದ ಪತ್ನಿಗೂ ವಿದ್ಯುತ್ ತಗುಲಿ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆಗೆ ಸಂಭಂಧಿಸಿದಂತೆ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು,

ಅವಘಡದಲ್ಲಿ ಮೃತ ಪಟ್ಟ ಕುಟುಂಬದವರಿಗೆ ಸರಕಾರದಿಂದ ರೂ. 10 ಲಕ್ಷ ರೂಪಾಯಿಯ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿ, ಮಕ್ಳಳ ವಿದ್ಯಾಭ್ಯಾಸಕ್ಕಾಗಿ ವಯಕ್ತಿಕ ರೂ.5 ಲಕ್ಷ ರೂಪಾಯಿ ಸಹಾಯ ನೀಡುವುದರ ಜೊತೆಗೆ ಮಕ್ಕಳಿಗೆ ಉದ್ಯೋಗ ನೀಡುವ ಭರವಸೆ ನೀಡಿದರು.

ಹೊಟ್ಟೆ ಪಾಡಿಗಾಗಿ ಗೋವಾ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತ ಪಟ್ಟಿದ್ದ ಹೊನ್ನಾವರ ತಾಲೂಕಿನ ಕಾಸರಕೋಡ ಪಂಚಾಯತನ ನಿವಾಸಿ ಕೃಷ್ಣ ಗಣಪಯ್ಯ ಗೌಡ ಇವರ ಮನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು,

ಕುಟುಂಬಕ್ಕೆ ಆಧಾರವಾಗಿದ್ದ ಪತಿಯ ಅಗಲಿಕೆಯಿಂದ ದುಃಖದಲ್ಲಿದ್ದ ಪತ್ನಿಗೆ ಹಾಗೂ ತಾಯಿಗೆ ಧೈರ್ಯ ಹೇಳಿ, ಮಗುವಿನ ಮುಂದಿನ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ ರೂ.1 ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಿದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading