ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಅಂಗವಾಗಿ ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲೆಯ ಸಭಾಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮ ಗುರುವಾರ ನಡೆಯಿತು. ಗೀತಾ ಕಂಠಪಾಠ, ಭಾಷಣ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ನಡೆದವು. ವಿವಿಧ ತಾಲೂಕುಗಳಿಂದ ನಾನಾ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮೀತಿಯ ವತಿಯಿಂದ ಬಹುಮಾನ ವಿತರಿಸಲಾಯಿತು.

ಹಿರಿಯ ವಕೀಲರಾದ ಜಿ.ಎಸ್.ಭಟ್ಟ ಹಳವಳ್ಳಿ, ಭಗವದ್ಗೀತಾ ಅಭಿಯಾನ ಸಮೀತಿಯ ತಾಲೂಕಾ ಅಧ್ಯಕ್ಷರಾದ ಜಿ.ಎನ್.ಭಟ್ ತಟ್ಟಿಗದ್ದೆ, ಸಮೀತಿಯ ಕೃಷ್ಣಾ ಬೋಡೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು.

ಪ್ರಾಥಮಿಕ ಶಾಲಾ ವಿಭಾಗ- ಕಂಠಪಾಠ – ಪ್ರಥಮ: ವಿಲೋಕ ಭಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣಗೆರೆ ಯಲ್ಲಾಪುರ, ದ್ವಿತೀಯ: ಅನ್ವಿತಾ ಹರಡೇಕರ್ ಶ್ರೀನಿಕೇತನ ಶಾಲೆ ಇಸಳೂರು ಶಿರಸಿ, ಭಾಷಣ – ಪ್ರಥಮ: ಹರ್ಷ ಅನಂತ ಭಾವಿಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಹಳ್ಳಿ, ದ್ವಿತೀಯ: ದೀಪಿಕಾ ಭಟ್ಟ ವಿಶ್ವದರ್ಶನ ಕೇಂದ್ರೀಯ ಶಾಲೆ ಯಲ್ಲಾಪುರ

ಪ್ರೌಢಶಾಲಾ ವಿಭಾಗ ಕಂಠಪಾಠ- ಪ್ರಥಮ: ಸುನಿಧಿ ಹೆಗಡೆ ಶ್ರೀನಿಕೇತನ ಶಾಲೆ ಇಸಳೂರು ಶಿರಸಿ, ದ್ವಿತೀಯ: ಶ್ರೀಷ ಹೆಗಡೆ ಸರ್ಕಾರಿ ಪ್ರೌಢಶಾಲೆ ಬಿಸಗೋಡು ಯಲ್ಲಾಪುರ
ಭಾಷಣ – ಪ್ರಥಮ: ಚಿನ್ಮಯ ಕೆರೆಗದ್ದೆ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿ, ದ್ವಿತೀಯ ಭುವನಾ ಹೆಗಡೆ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ

ರಸಪ್ರಶ್ನೆ- ಪ್ರಥಮ: ಸಂಗೀತಾ ಗರಡಿ ಮತ್ತು ವೈಷ್ಣವಿ ಸದಬಾನವ ಸರ್ಕಾರಿ ಪ್ರೌಢಶಾಲೆ ತೇರಗಾಂವ್ ಹಳಿಯಾಳ, ದ್ವಿತೀಯ: ಅನೀಶ ಭಟ್ಟ ಮತ್ತು ಯೋಗೀಶ್ವರ ಭಟ್ಟ ವಿಶ್ವದರ್ಶನ ಕೇಂದ್ರೀಯ ಶಾಲೆ ಯಲ್ಲಾಪುರ, ಕಾಲೇಜು ವಿಭಾಗ – ಭಾಷಣ – ಪ್ರಥಮ: ಪ್ರಾರ್ಥನಾ ಭಟ್ಟ ಎಂ.ಇ.ಎಸ್. ಪಿಯು ಕಾಲೇಜು ಶಿರಸಿ, ದ್ವಿತೀಯ: ದಿಗಂತ ಭಟ್ಟ ವಿಶ್ವದರ್ಶನ ಪಿಯು ಕಾಲೇಜು ಯಲ್ಲಾಪುರ
ನ.29 ಶನಿವಾರ ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದೆ

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading