ಸಾಹಿತಿ, ಕವಯತ್ರಿ, ಸಂಘಟಕಿ ,ವಾಗ್ಮಿ, ಅಂಕಣಗಾರ್ತಿ, ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಯಲ್ಲಾಪುರ ತಾಲೂಕಿನ ಅರಬೈಲ್ ಶಾಲೆಯ ಮುಖ್ಯಾಧ್ಯಾಪಕಿ ಶಿವಲೀಲಾ ಹುಣಸಗಿಯವರಿಗೆ ಕರ್ನಾಟಕ ಶಿರೋಮಣಿ ರಾಜ್ಯ ಪ್ರಶಸ್ತಿ ಲಭಿಸಿದೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು, ಕುವೆಂಪು ವಿಶ್ವವಿದ್ಯಾಲಯ ಶಂಕರಘಟ್ಟ ಶಿವಮೊಗ್ಗ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಶಿವಮೊಗ್ಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ನಗರದ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದ ಮಹಾಕವಿ ಕುವೆಂಪು ವೇದಿಕೆಯಲ್ಲಿ ನಡೆದ ಅಖಿಲ ಕರ್ನಾಟಕ ಐದನೆಯ ಕವಿ-ಕಾವ್ಯ ಸಮ್ಮೇಳನದಲ್ಲಿ ಶಿವಲೀಲಾ ಹುಣಸಗಿಯವರಿಗೆ ಕರ್ನಾಟಕ ಶಿರೋಮಣಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ ಸೋಮಶೇಖರ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ರಾಜೇಂದ್ರ ಚೆನ್ನಿ, ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ(ಮೌಲ್ಯಮಾಪನ) ಪ್ರೋ. ಆರ್.ತಿಮ್ಮರಾಯಪ್ಪ,

ನಾಡಿನ ಹಿರಿಯ ಸಾಹಿತಿ ಡಾ.ರಂಜಾನ್ ದರ್ಗಾ, ಕಲಾನಿಕಾಯ ಡೀನರಾದ ಪ್ರೋ. ಚಂದ್ರಶೇಖರ ಎಸ್, ಪ್ರಾಧ್ಯಾಪಕ ಡಾ.ಆಂಜನಪ್ಪ, ನ್ಯಾಯವಾದಿಗಳದ ಕೆ.ಪಿ.ಶ್ರೀಪಾಲ್, ಕೇ.ಕ.ಸಾ.ವೇ.ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಎಸ್ ಉಪ್ಪಾರ, ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಪ್ರಶಾಂತ ನಾಯಕ ಜಿ,ಕೆ. ಕ.ಸಾ.ವೇ.ಜಿಲ್ಲಾ ಗೌರವಾಧ್ಯಕ್ಷ ಡಾ.ಕೆ.ಜಿ ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು. ಕೇ.ಕ.ಸಾ.ವೇ. ಶಿವಮೊಗ್ಗ ಜಿಲ್ಲಾಧ್ಯಕ್ಷೆ ಡಾ. ಎಚ್.ಕೆ.ಹಸೀನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading