ಯಲ್ಲಾಪುರ ಪಟ್ಟಣದ ನಾಯಕನಕೆರೆ ಶ್ರೀಶಾರದಾಂಬಾ ದೇವಾಲಯದಲ್ಲಿ ಜ.25 ರವಿವಾರದಂದು ವಾರ್ಷಿಕ ರಥಸಪ್ತಮಿ ಜಾತ್ರಾಮಹೋತ್ಸವ ಹಾಗೂ ರಥೋತ್ಸವ ನಡೆಯಲಿದೆ.

ಶ್ರೀ ಶಾರದಾಂಬಾ ದೇವರು

ಈ ನಿಮಿತ್ತ ದೇವಾಲಯದಲ್ಲಿ ಅಂದು ಬೆಳಿಗ್ಗೆ ಬ್ರಹ್ಮಕೂರ್ಚ ಹವನ, ಗಣೇಶ ಹವನ, ಶ್ರೀಸೂಕ್ತ ಹೋಮ, ಪೂರ್ಣಾಹುತಿ, ಅಷ್ಟದಿಕ್ಪಾಲ ದೇವತೆಗಳಿಗೆ ಮತ್ತು ಕ್ಷೇತ್ರಪಾಲಾದಿ ಸಕಲ ದೇವತೆಗಳಿಗೆ ಬಲಿಪ್ರದಾನ, ಶ್ರೀದೇವರ ಸನ್ನಿಧಿಯಲ್ಲಿ ಕುಂಕುಮಾರ್ಚನೆ, ರಾಜೋಪಚಾರ ಪೂಜೆ, ಮಹಾಪೂಜೆ ನಡೆಯಲಿದೆ.

ಶಾರದಾಂಬಾ ದೇವರಿಗೆ ಕುಂಕುಮಾರ್ಚನೆ, ಉಡಿಸೇವೆ, ಹಣ್ಣು ಕಾಯಿ ಸಮರ್ಪಣೆ ಸೇವೆ ನಡೆಯಲಿದೆ. ಮಧ್ಯಾಹ್ನ ಸ್ವರ್ಣವಲ್ಲೀ ಶ್ರೀಗಳು ದೇವಾಲಯಕ್ಕೆ ಆಗಮಿಸಲಿದ್ದಾರೆ. ಸಂಜೆ ಶ್ರೀಗಳ ಉಪಸ್ಥಿತಿಯಲ್ಲಿ ಶಾರದಾಂಬಾ ದೇವರ ರಥೋತ್ಸವ ನಡೆಯಲಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading