ಫೆ.11ರಿಂದ ಫೆ.19 ರ ವರೆಗೆ ನಡೆಯಲಿರುವ ಯಲ್ಲಾಪುರ ಪಟ್ಟಣದ ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಸೂಕ್ತವಾಗಿ ನಿಭಾಯಿಸಲು ಪೊಲೀಸ್ ಇಲಾಖೆ ಸರ್ವರೀತಿಯಿಂದ ಸಜ್ಜಾಗಿದೆ. ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅನಪೇಕ್ಷಿತ ಘಟನೆಗಳು ಸಂಭವಿಸದಂತೆ ಪೊಲೀಸರು ನಿಗಾ ವಹಿಸಿದ್ದು, ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳನ್ನು ಹಾಗೂ ಗೃಹರಕ್ಷಕದಳ, KSRP, DARತುಕಡಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಒಬ್ಬರು ಡಿವೈಎಸ್ಪಿ, 6 ಪೊಲೀಸ್ ಇನ್ಸ್ಪೆಕ್ಟರ್, 25 ಪಿಎಸ್ಸೈಗಳು, 34 ಎಸ್ಸೈಗಳು, 250 ಪೊಲೀಸ್ ಸಿಬ್ಬಂದಿಗಳು, 35 ಮಹಿಳಾ ಸಿಬ್ಬಂದಿಗಳು, 71 ಹೋಮ್ ಗಾರ್ಡ್‍ಗಳು, 3 KSRP ಹಾಗೂ 4 DAR ತುಕಡಿಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ. ಜಾತ್ರಾ ಮಂಟಪದಲ್ಲಿ ಹಾಗೂ ವಾಯ್.ಟಿ.ಎಸ್.ಮೈದಾನದಲ್ಲಿ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸಲಾಗುವುದು. ವಿವಿದೆಡೆ ಬ್ಯಾರಿಕೇಡ್, ಸೂಚನಾ ಫಲಕಗಳನ್ನು ಅಳವಡಿಸಲಾಗುವುದು.

ಗ್ರಾಮದೇವಿ ಜಾತ್ರೆಯ ಸಂದರ್ಭದಲ್ಲಿ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಜನಜಂಗುಳಿಯಾಗುವ ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಅತ್ಯಾಧುನಿಕ ಸಿ.ಸಿ.ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ತೆರೆಯಲಾಗುವ ಕಂಟ್ರೋಲ್ ರೂಂನಿಂದ ನಿರಂತರ ಕಣ್ಗಾವಲು ವ್ಯವಸ್ಥೆ ರೂಪಿಸಲಾಗಿದೆ. ದೇವಿ ಗದ್ದುಗೆಯ ಸಮೀಪ ಹಾಗೂ ಅಮ್ಯೂಸ್ ಮೆಂಟ್ ಪಾರ್ಕ್ ಸಮೀಪ ಅಗ್ನಿಶಾಮಕ ವಾಹನ, ಅಗ್ನಿಬೈಕ್ ಗಳನ್ನು, ಅಂಬ್ಯೂಲೆನ್ಸ್ ಗಳನ್ನು ನಿಯೋಜಿಸಲಾಗುವುದು,

ಇದೇ ಮೊದಲ ಬಾರಿಗೆ ಜಾತ್ರಾ ಪೇಟೆಯಲ್ಲಿ ಹೈಟೆಕ್ ಫೇಸ್ ಡಿಟೆಕ್ಟಿವ್ ಸಿ.ಸಿ.ಕ್ಯಾಮರಾ ಬಳಸಲಾಗುತ್ತಿದೆ. ಈ ಹಿಂದೆ ರಾಜ್ಯದ ಯಾವುದೇ ಭಾಗಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ದುಷ್ಕರ್ಮಿಗಳು ಜಾತ್ರಾಪೇಟೆಗೆ ಬಂದರೆ ಈ ಹೈಟೆಕ್ ಕ್ಯಾಮರಾಗಳು ಅಂತವರ ಮುಖವನ್ನು ಸ್ಪಷ್ಟವಾಗಿ ಗುರುತಿಸಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುತ್ತವೆ. ಕೂಡಲೇ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಇನ್ನೂ ಹಲವಾರು ರೀತಿಯ ಬಂದೋಬಸ್ತ್ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಸುಸೂತ್ರವಾಗಿ ಜಾತ್ರೆ ನಡೆಯಲು ಪೊಲೀಸ್ ಇಲಾಖೆಯು ಶ್ರಮ ವಹಿಸಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading