ಒಂದು ತಿಂಗಳು ಯಲ್ಲಾಪುರ ತಹಶೀಲ್ದಾರರಾಗಿ ಪ್ರೊಬೆಷನರಿ ಅವಧಿ ಪೂರೈಸಿ ವರ್ಗಾವಣೆಗೊಂಡ ಐ.ಎ.ಎಸ್.ಅಧಿಕಾರಿ ಜುಫಿಶಾನ್ ಹಕ್ ಅವರಿಗೆ ನಾಗರಿಕ ವೇದಿಕೆಯ ವತಿಯಿಂದ ಶುಕ್ರವಾರ ಪಟ್ಟಣದ ಆಡಳಿತ ಸೌಧದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.

ಜುಫಿಶಾನ್ ಹಕ್ ಮಾತನಾಡಿ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ, ನಿವೃತ್ತ ತಹಶೀಲ್ದಾರರಾದ ಡಿ.ಜಿ.ಹೆಗಡೆ, ತುಳಸಿ ಪಾಲೇಕರ್, ನಾಗರಿಕ ವೇದಿಕೆಯ ಸುರೇಶ ಬೋರ್ಕರ್, ಅಬ್ದುಲ್ ಖಾದರ್ ಶೇಖ್, ಬೀರಣ್ಣ ನಾಯಕ ಮೊಗಟಾ, ವೇಣುಗೋಪಾಲ ಮದ್ಗುಣಿ, ಶ್ರೀರಂಗ ಕಟ್ಟಿ, ಮಹೇಶ ನಾಯ್ಕ, ಸುಧೀರ ಕೋಡ್ಕಣಿ ಮುಂತಾದವರು ಇದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ದುಡಿಯಲು ಅಶಕ್ತರಾದ ಆಯ್ದ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಯಿತು.

ಈಗಾಗಲೇ ಆಯ್ಕೆ ಮಾಡಿರುವ ದುಡಿಯಲು ಅಶಕ್ತರಾದವರಿಗೆ ವಾತ್ಸಲ್ಯ ಯೋಜನೆ ಅಡಿಯಲ್ಲಿ ನಿರ್ಗತಿಕರ ಮಾಸಾಶನ ನೀಡಲಾಗುತ್ತಿದ್ದು, ಅವರ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ನೈಜವಾದ ಅವಶ್ಯಕತೆಗಳನ್ನು ಗುರುತಿಸಿ ವಾತ್ಸಲ್ಯ ಕಿಟ್ ನೀಡಲಾಯಿತು.

ಯಲ್ಲಾಪುರ ತಾಲೂಕಿನ ಒಟ್ಟು 13 ಜನ ಸದಸ್ಯರಿಗೆ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಅವರು ಕಳಿಸಿಕೊಟ್ಟ ದಿನಬಳಕೆ ವಸ್ತುಗಳು, ಪಾತ್ರೆ, ಬಟ್ಟೆ ಇತರೇ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು.

ಯಲ್ಲಾಪುರ ತಾಲೂಕಿನ ತೇಲಂಗಾರಿನಲ್ಲಿ ಅಮೃತಬಿಂದು ಸೇವಾ ಸಮಿತಿ ಆಶ್ರಯದಲ್ಲಿ ಫೆ.8 ರವಿವಾರ ಸಂಜೆ 4 ಗಂಟೆಯಿಂದ 5 ನೇ ವರ್ಷದ ಆಲೆಮನೆ ಹಬ್ಬ ನಡೆಯಲಿದೆ. ಈ ಆಲೆಮನೆ ಹಬ್ಬಕ್ಕೆ ಸಾರ್ವಜನಿಕರು ಆಗಮಿಸಬೇಕೆಂದು ಕೋರಲಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading