ಶಿರಸಿ ತಾಲೂಕಿನ ಬ್ಯಾಗದ್ದೆಯಲ್ಲಿ ಸೋದೆ ಅರಸರ ಕಾಲದ ಸುಮಾರು 500 ವರ್ಷಕ್ಕೂ ಅಧಿಕ ಕಾಲದ ಇತಿಹಾಸ ಇರುವ ಶ್ರೀ ಉಮಾಮಹೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ಸಮಸ್ತ ಗ್ರಾಮಸ್ಥರ ಸಹಕಾರದಲ್ಲಿ ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ಊರ ಹಿರಿಯರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದರು.

ಕಳೆದ ಸುಮಾರು ಒಂದೂ ಶತಮಾನಕ್ಕೂ ಅಧಿಕ ಸಮಯದಿಂದ ದೇವಾಲಯದ ಪುನರ್ ನಿರ್ಮಾಣಕ್ಕೆ ಊರವರು ಪ್ರಯತ್ನ ನಡೆಸುತ್ತಿದ್ದರೂ, ಅದು ಕೈಗೂಡದೇ ಹಾಗೆಯೇ ಉಳಿದಿತ್ತು. ದೇವಾಲಯವೂ ಸಹ ಹಂತ ಹಂತವಾಗಿ ಶಿಥಿಲಗೊಂಡಿತ್ತು. ಇದೀಗ ಅನಂತಮೂರ್ತಿ ಹೆಗಡೆ ಅವರು ತಮ್ಮ ಹುಟ್ಟೂರಿನ ಈ ದೇವಾಲಯದ ಪುನರ್ ನಿರ್ಮಾಣಕ್ಕೆ ಊರಿನ ಸಮಸ್ತ ನಾಗರಿಕರ ಸಹಕಾರದಿಂದ ನೇತೃತ್ವ ವಹಿಸಿದ್ದಾರೆ.

ಶಕ್ತಿಪೀಠ ಎನಿಸಿರುವ ಈ ಸ್ಥಳದಲ್ಲಿ ಶೀಘ್ರ ಪ್ರಸಾದ ಸ್ವರೂಪಿ ಉಮಾಮಹೇಶ್ವರ ದೇವರ ಜೊತೆಗೆ ಪಾರ್ವತಿ ದೇವಿ, ಗಣಪತಿ, ಲಕ್ಷ್ಮೀನಾರಾಯಣ, ಆಂಜನೇಯ ದೇವರನ್ನು ಒಳಗೊಂಡು ಪಂಚ ದೇವತೆಗಳ ಸಾನಿಧ್ಯವಿದೆ. ಮಹಾಶಿವರಾತ್ರಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳೂ ಇಲ್ಲಿ ನಡೆಯುತ್ತಿದ್ದು, ಸ್ಥಳೀಯವಾಗಿ ಭಕ್ತರ ಮನದಾಸೆಯನ್ನು ಈಡೇರಿಸುವ ಉಮಾಮಹೇಶ್ವರ ದೇವರ ದೇವಾಲಯದ ಪುನರ್ ನಿರ್ಮಾಣಕ್ಕೆ ಇದೀಗ ಕಾಲ ಕೂಡಿಬಂದಿದ್ದು, ಭಕ್ತರು, ಸ್ಥಳಿಕರು ಅತೀವ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading