ತೆಂಗಿನಮರದಿಂದ ಆಕಸ್ಮಿಕವಾಗಿ ಬಿದ್ದು ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ನಡೆದಿದೆ.

ಇದನ್ನೂ ಓದಿ: ಯಲ್ಲಾಪುರ ಜಾತ್ರೆಗೆ ಸಕಲ ಸಿದ್ಧತೆ – ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್

ಮಾಗೋಡಿನ ಕಂಚಿತಗ್ಗು ನಿವಾಸಿ 25 ವರ್ಷದ ಕೂಲಿ ಕೆಲಸದ ವಿನಾಯಕ ದೇವೇಂದ್ರ ಸಿದ್ದಿ ಮೃತಪಟ್ಟ ವ್ಯಕ್ತಿಯಾಗಿದ್ದು, ಈತನು ಶನಿವಾರ ತನ್ನ ತೋಟದಲ್ಲಿದ್ದ ತೆಂಗಿನ ಮರದ ತೆಂಗಿನ ಕಾಯಿಗಳನ್ನು ಕೊಯ್ಯುವಾಗ ಆಕಸ್ಮಿಕವಾಗಿ ತೆಂಗಿನ ಮರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಯಲ್ಲಾಪುರ ಜಾತ್ರೆ: ಕಣ್ಮನ ಸೆಳೆಯುವ ಆಕರ್ಷಕ ಜಾತ್ರಾ ಮಂಟಪ

ವಿನಾಯಕ ಸಿದ್ದಿಯ ಸಾವಿನಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮೃತನ ಸಹೋದರ ಗಣೇಶ ಸಿದ್ದಿ ಯಲ್ಲಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading