ಪರಶಿವನ ಆರಾಧನಾ ಪುಣ್ಯದಿನವಾದ ಶಿವರಾತ್ರಿಯನ್ನು ರವಿವಾರ ಎಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಶಿವನಾಮ ಸ್ಮರಣೆ, ಶಿವಾಲಯಗಳಲ್ಲಿ ಶಿವನ ಆರಾಧನೆ, ಭಕ್ತರಿಂದ ಶಿವನ ದರ್ಶನ, ಪೂಜಾ ಕೈಂಕರ್ಯಗಳು ಅಹೋರಾತ್ರಿ ನಡೆಯುತ್ತಿವೆ. ಗೋಕರ್ಣ, ಮುರುಡೇಶ್ವರ, ಕವಳಾ, ಸಿದ್ಧೇಶ್ವರ, ಯಾಣ ಸೇರಿದಂತೆ ವಿವಿದೆಡೆ ಸಾವಿರಾರು ಭಕ್ತರು ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಶಾಲ್ಮಲಾ ನದಿ ತಟದ ಭೀಮನಪಾದದಲ್ಲಿ ಉಭಯ ಶ್ರೀಗಳು ಸತ್ಯನಾರಾಯಣ ವೃತ, ಪರಶಿವನ ಪೂಜೆ ನೆರವೇರಿಸಿದರು.
ಯಲ್ಲಾಪುರ ತಾಲೂಕಿನ ವಿವಿದೆಡೆ ಶಿವ ದೇವಾಲಯಗಳಲ್ಲಿ ಭಕ್ತರು ಶಿವಪೂಜೆ ನೆರವೇರಿಸಿದರು.
ಅರಬೈಲಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಪೂಜೆ ನೆರವೇರಿಸಿದರು.
ನಂದೊಳ್ಳಿ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ನೂರಾರುಭಕ್ತರು ಶಿವ ಪೂಜೆಗೈದರು.
ಇಡಗುಂದಿ ರಾಮಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯಂದು ಸಾವಿರಾರು ಭಕ್ತರು ಶಿವನ ಪೂಜೆ ನೆರವೇರಿಸಿದರು.
ಯಲ್ಲಾಪುರ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಶಿವಪೂಜೆಯ ಸಂಭ್ರಮ
ಯಲ್ಲಾಪುರ ಪಟ್ಟಣದ ನಾಯಕನಕೆರೆ ಗುರುಲಿಂಗೆಶ್ವರ ಸನ್ನಿಧಾನದಲ್ಲಿ ಭಕ್ತರು ಶಿವಪೂಜೆಯಲ್ಲಿ ಪಾಲ್ಗೊಂಡರು.
ಗುಳ್ಳಾಪುರದಲ್ಲಿ ಗಂಗಾರತಿ
ಶಿವರಾತ್ರಿಯ ಪುಣ್ಯಪರ್ವಕಾಲದಲ್ಲಿ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಗಂಗಾವಳಿ ನದಿಗೆ ಗಂಗಾರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಗಂಗಾ ಪೂಜೆ
ಬೇಡ್ತಿ ನದಿ ತಿರುವು ಯೋಜನೆ ಜಾರಿಯಾಗಬಾರದು ಎಂದು ಪ್ರಾರ್ಥಿಸಿ ಗ್ರಾಮಸ್ಥರುಬೇಡ್ತಿ ಸೇತುವೆಯ ಸಮೀಪ ನದಿಪೂಜೆ ನೆರವೇರಿಸಿದರು.
ಗ್ರಾಮದೇವಿ ದರ್ಶನ ಪಡೆದ ಗಣ್ಯರು
ಯಲ್ಲಾಪುರದಲ್ಲಿ ನಡೆಯುತ್ತಿರುವ ಗ್ರಾಮ ದೇವಿ ಜಾತ್ರೆಯ ನಿಮಿತ್ತ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆಯವರು ಕುಟುಂಬಸ್ಥರೊಂದಿಗೆ ಆಗಮಿಸಿ ಜಾತ್ರಾ ಗದ್ದುಗೆಯಲ್ಲಿ ಗ್ರಾಮದೇವಿಯರ ಪೂಜೆ ನೆರವೇರಿಸಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಗ್ರಾಮದೇವಿಗೆ ಪೂಜೆ ಅರ್ಪಿಸಿದರು.