ಯಲ್ಲಾಪುರ ಪಟ್ಟಣದ ತಾಲೂಕಾ ದಂಡಾಧಿಕಾರಿಗಳ ಕಛೇರಿಯಲ್ಲಿ ಬಂಜಾರಾ ಜನಾಂಗದ ಆರಾಧ್ಯ ದೇವರಾದ ಶ್ರೀಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಆಚರಿಸಲಾಯಿತು.

ತಹಶೀಲ್ದಾರ್ ಚಂದ್ರಶೇಖರ್ ಹೊಸಮನಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಂತ್ ಸೇವಾಲಾಲರ ಆದರ್ಶಗಳು ಹಾಗೂ ಅವರು ಸಾರಿದ ಸಂದೇಶಗಳು ಮತ್ತು ಅವರು ನುಡಿದಿರುವ ಭವಿಷ್ಯದ ವಾಣಿಗಳು, ಇಡಿ ಮಾನವ ಸಮಾಜಕ್ಕೆ ಪ್ರೇರಣೆಯಾಗಿದೆ, ಅವರ ವಾಣಿಯಲ್ಲಿ ಒಂದಾದ ರಾಬಜನಾ ಚಾಬೇನ್ ಮಳಚ ಅಂದರೆ ಪ್ರತಿಯೋಬ್ಬ ವ್ಯಕ್ತಿ ಕಷ್ಟ ಪಟ್ಟು ದುಡಿಯಬೇಕು, ದುಡಿದಾಗಲೇ ತಿನ್ನೊಕೆ ಅನ್ನ ಸಿಗೋದು ಎಂಬ ಅವರ ನುಡಿಯು ಕಾಯಕದ ಮಹತ್ವವನ್ನು ಸಾರಿದೆ ಎಂದರು.

ಈ ಸಂದರ್ಭದಲ್ಲಿ ಬಂಜಾರಾ ಸಮಾಜದ ಪ್ರಮುಖರಾದ ಈಶ್ವರ್ ರಾಠೋಡ, ಬಂಜಾರ ಸೇವಾ ಪ್ರತೀಷ್ಠಾನದ ಅಧ್ಯಕ್ಷ ಶಂಕರ ನಾಯಕ, ಗೌರವಾಧ್ಯಕ್ಷ ಭೀಮಸಿಂಗ್ ಲಮಾಣಿ, ನಿವೃತ್ತ ಪಿ ಎಸ್ ಐ ಎಸ್.ಬಿ. ಚವ್ಹಾಣ, ಸಿ.ಪಿ. ರಾಠೋಡ್, ಬಂ.ಸೇ.ಪ್ರ. ಉಪಾಧ್ಯಕ್ಷೆ ಗೀತಾ ಚವ್ಹಾಣ, ಖಜಾಂಚಿ ಎಸ್.ಟಿ.ಬೇವಿನಕಟ್ಟಿ, ಗೌರವ ಸಲಹೆಗಾರರಾದ ಗುರುಪ್ರಸಾದ್, ಸಂಗಿತಾ, ತಾಲೂಕಾ ಪಂಚಾಯತದ ಗಂಗಾಧರ ಭಟ್, ಬಂ.ಸೇ.ಪ್ರ. ಸಹಕಾರ್ಯದರ್ಶಿ ಚಂದ್ರಶೇಖರ ನಾಯಕ್, ರವಿಕುಮಾರ್, ಶೋಭಾ, ಮಿತಾ ಚವ್ಹಾಣ, ಮಂಜುನಾಥ ರಾಠೊಡ್, ಸಂತೋಷ ಹಾಗೂ ತಹಶೀಲ್ದಾರ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading