ಯಲ್ಲಾಪುರ ತಾಲೂಕಿನ ಬಳಗಾರ ಕಾಲೋನಿಯಲ್ಲಿ ಐದನೇ ವರ್ಷದ ಆಲೆಮನೆ ಹಬ್ಬವು ಶನಿವಾರ ಸಂಜೆ ಅದ್ದೂರಿಯಾಗಿ ನಡೆದು ಜನರ ಮೆಚ್ಚುಗೆ ಪಡೆಯಿತು. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಬಳಗಾರ ಆಲೆಮನೆ ಹಬ್ಬವು ಯಲ್ಲಾಪುರ ತಾಲೂಕಿನಲ್ಲಿ ಉತ್ತಮವಾಗಿ ಸಂಘಟನೆಯಾಗುವ ಆಲೆಮನೆ ಹಬ್ಬ ಎಂದೇ ಪ್ರಸಿದ್ಧವಾಗಿದೆ.

ಶನಿವಾರ ಸಂಜೆ ಆರು ಗಂಟೆಗೆ ಗಣಪತಿ ಪೂಜೆಯೊಂದಿಗೆ ಆಲೆಮನೆ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ರಾತ್ರಿ 10.30 ಗಂಟೆಯ ವರೆಗೂ ಆಲೆಮನೆ ಹಬ್ಬ ಮುಂದುವರಿದಿದ್ದು, ನೂರಾರು ಜನರು ಆಲೆಮನೆ ಹಬ್ಬಕ್ಕೆ ಆಗಮಿಸಿ ಉಚಿತವಾಗಿ ವಿತರಿಸಲಾದ ಸಿಹಿ,ಸಿಹಿಯಾದ ಕಬ್ಬಿನ ಹಾಲು ಕುಡಿದು, ಮಿರ್ಚಿ ಭಜಿ, ಖಾರಾ ಮಂಡಕ್ಕಿ ಹಾಗೂ ವಿವಿಧ ತಿಂಡಿ,ತಿನಿಸುಗಳನ್ನು ಸವಿದು ಖುಷಿಪಟ್ಟರು.

ಬಳಗಾರ ಆಲೆಮನೆ ಹಬ್ಬದ ಯಶಸ್ಸಿಗಾಗಿ ಸಂಘಟಕ ಗಣಪತಿ ಪಟಗಾರ ಹಾಗೂ ಸಂಗಡಿಗರು ಕಳೆದ ಅನೇಕ ದಿನಗಳಿಂದ ಶ್ರಮಿಸಿದ್ದಾರೆ. ನಿರೀಕ್ಷೆಗೂ ಮೀರಿ ಆಲೆಮನೆ ಹಬ್ಬಕ್ಕೆ ಜನರು ಆಗಮಿಸಿರುವುದು ಸಂಘಟಕರಿಗೆ ಸಂತಸ ತಂದಿದೆ. ಸಂಘಟಕರು ಅತ್ಯಂತ ಶಿಸ್ತುಬದ್ಧವಾಗಿ ಆಲೆಮನೆ ಹಬ್ಬವನ್ನು ಆಯೋಜಿಸಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading