ಗುರುವಾರ ಯಲ್ಲಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ ಅತ್ಯಾಧುನಿಕ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ
ಉತ್ತರಕನ್ನಡ ಪ್ರವಾಸೋದ್ಯಮ ಮುಕುಟಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗಲಿದೆ. ಯಲ್ಲಾಪುರದಲ್ಲಿ ಹೆದ್ದಾರಿಯ ಅಂಚಿನಲ್ಲಿ ನೂತನವಾಗಿ ನಿರ್ಮಿಲಾದ ಆಕರ್ಷಕ ವಿನ್ಯಾಸದ ಅತ್ಯಾಧುನಿಕ, ವಿವಿಧ ಸೌಲಭ್ಯಗಳನ್ನು ಒಳಗೊಂಡ ಹೊಟೇಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ ಏ.9 ಗುರುವಾರ ಬೆಳಿಗ್ಗೆ ಲೋಕಾರ್ಪಣೆಯಾಗಲಿದೆ.
ಪಟ್ಟಣದ ಉದ್ಯಮನಗರ ಕ್ರಾಸ್ ಸಮೀಪ ನಿರ್ಮಾಣಗೊಂಡ ಸಪ್ತಮಿ ಪ್ಲಾಜಾ ಕಟ್ಟಡದಲ್ಲಿ ಅಯೋಧ್ಯ ವೆಸ್ಟೆರ್ನ್ ಸ್ಟೇ ಉದ್ಘಾಟನೆಗೊಳ್ಳಲಿದೆ. ಎಲ್ಲರಿಗೂ ಅನುಕೂಲವಾಗುವಂತಹ ಮಧ್ಯವರ್ತಿ ಸ್ಥಳದಲ್ಲಿ ಹೋಟೆಲ್ ಅಯೋಧ್ಯ ವೆಸ್ಟೆರ್ನ್ ಸ್ಟೇ ಆರಂಭಗೊಳ್ಳುತ್ತಿದ್ದು, ಜನರಿಗೆ ಬಹಳ ಉಪಯುಕ್ತವಾಗಲಿದೆ. ಶುಚಿ, ರುಚಿಯಾದ ಊಟ, ಉಪಹಾರ, ಹಾಗೂ ವಸತಿಗೃಹಗಳ ಸೌಲಭ್ಯ ಹೊಂದಿರುವ ಅಯೋಧ್ಯ ವೆಸ್ಟೆರ್ನ್ ಸ್ಟೇ ಗ್ರಾಹಕರ ಸೇವೆಗೆ ಸಜ್ಜುಗೊಂಡಿದೆ.
ಹೋಟೆಲ್ ಉದ್ಯಮದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ನಾಡಿನ ಹೆಸರಾಂತ ಹೊಟೇಲ್ ಉದ್ಯಮಿಗಳು ಅಯೋಧ್ಯ ವೆಸ್ಟೆರ್ನ್ ಸ್ಟೇ ಆರಂಭಿಸಿದ್ದಾರೆ. ಎಲ್ಲ ಬಗೆಯ ಶಾಖಾಹಾರಿ ಊಟ, ಉಪಹಾರದ ಜೊತೆ, ಚಾಟ್ಸ್, ಐಸ್ ಕ್ರೀಂ, ಉತ್ತರಭಾರತ, ದಕ್ಷಿಣ ಭಾರತ ಮಾದರಿಯ ಊಟ, ಖಾದ್ಯಗಳು, ಸ್ನ್ಯಾಕ್ಸ್, ಚೈನೀಸ್ ಸೇರಿದಂತೆ ವಿವಿಧ ಬಗೆಯ ತಿಂಡಿ ತಿನಿಸುಗಳು ಇಲ್ಲಿ ಲಭ್ಯ ಇವೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯದೊಂದಿಗೆ, ಮನಸೆಳೆಯುವ ಒಳಾಂಗಣ ವಿನ್ಯಾಸದೊಂದಿಗೆ ಅಯೋಧ್ಯ ವೆಸ್ಟೆರ್ನ್ ಸ್ಟೇ ಗ್ರಾಹಕರಿಗೆ ಪಾರಂಪರಿಕ ಹಾಗೂ ಆಧುನಿಕ, ವಿನೂತನ ಹಲವು ಸೇವಾ ಸೌಲಭ್ಯಗಳನ್ನು ನೀಡಲಿದೆ.
ಅಯೋಧ್ಯ ವೆಸ್ಟೆರ್ನ್ ಸ್ಟೇ ಗೆ ಭೇಟಿನೀಡಿ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದು ಸಪ್ತಮಿ ಪ್ಲಾಜಾ ಕಟ್ಟಡದ ಮಾಲೀಕರಾದ ಸುಪ್ರೀತಾ ಶೆಟ್ಟಿ ಮತ್ತು ಚಂದ್ರಶೇಖರ ಶೆಟ್ಟಿ, ಒಡೆಯ ಗ್ರೂಪ್ಸ್ ಮಾಲೀಕರಾದ ಎಸ್.ನವೀನ್ ಶೆಟ್ಟಿ ಆಲೂರು ವಿನಂತಿಸಿದ್ದಾರೆ.
ಗುರುವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಹಾಗೂ ಅಯೋಧ್ಯ ವೆಸ್ಟೆರ್ನ್ ಸ್ಟೇ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಸಕ ಶಿವರಾಮ ಹೆಬ್ಬಾರ್ ಅವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.