ಯಲ್ಲಾಪುರ ತಾಲೂಕಿನ ಹುಲಗಾನ ಶ್ರೀಲಕ್ಷ್ಮೀನರಸಿಂಹ ದೇವಲಯದಲ್ಲಿ ಏ.20 ಸೋಮವಾರದಂದು ವಾರ್ಷಿಕ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯಲಿದೆ.
ಈ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಶುದ್ಧಿಕರ್ಮ, ಪಂಚಗವ್ಯ ಹೋಮ, ಶ್ರೀಲಕ್ಷ್ಮೀನರಸಿಂಹ ಜಪ, ಶ್ರೀಲಕ್ಷ್ಮೀನರಸಿಂಹ ಮೂಲಮಂತ್ರ ಹವನ, ಪುರುಷಸೂಕ್ತ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಮಾತೆಯರಿಂದ ಭಗವದ್ಗೀತಾ ಪಠಣ, ವಿಷ್ಣು ಸಹಸ್ರನಾಮ ಪಠಣ, ಸಾಯಂಕಾಲ ಗಂಟೆಯಿಂದ ಗಜಾನನ ಮಾರುತಿ ತಾಳಮದ್ದಳೆ ಒಕ್ಕೂಟದವರಿಂದ ಸುಧನ್ವಾರ್ಜುನ ತಾಳಮದ್ದಳೆ ನಡೆಯಲಿದೆ.
ರಾತ್ರಿ 9 ಗಂಟೆಗೆ ನಡೆಯುವ ಸಭಾಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸುವರು. ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಸ್.ಭಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಆನಗೋಡ ಸೊಸೈಟಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಪುರೋಹಿತರಾದ ವೆಂಕಟ್ರಮಣ ಭಟ್ಟ ಹೂಗಜ್ಜರಮನೆ,
ಹಿರಿಯ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ, ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ, ನಂದೊಳ್ಳಿ ಸೊಸೈಟಿ ಅಧ್ಯಕ್ಷ ಟಿ.ವಿ.ಭಾಗ್ವತ್, ಕೆ.ಡಿ.ಸಿ.ಸಿ.ಬ್ಯಾಂಕ್ ನಿವೃತ್ತ ನೌಕರ ರಾಮಕೃಷ್ಣ ಭಟ್ಟ ಹುಲಗಾನ, ಮೊಕ್ತೇಸರ ವೆಂಕಟ್ರಮಣ ಹೆಗಡೆ, ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ಟ, ಖಜಾಂಚಿ ವಿಶ್ವನಾಥ ಭಟ್ಟ ಮುಂತಾದವರು ಪಾಲ್ಗೊಳ್ಳುವರು.
9.30ಕ್ಕೆ ಖ್ಯಾತ ಕಲಾವಿದರಿಂದ ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.