ಯಲ್ಲಾಪುರ ತಾಲೂಕಿನ ಬೀರಗದ್ದೆಯಲ್ಲಿ ಜನವಸತಿ ಪ್ರದೇಶಕ್ಕೆ ಬಂದಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಅರಬೈಲಿನ ಸೂರಜ್ ಶೆಟ್ಟಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಶುಕ್ರವಾರ ಬೀರಗದ್ದೆಯಲ್ಲಿ ಮನೆಯ ಸಮೀಪ ಬಿಳಿ ಕಾಳಿಂಗ ಸರ್ಪ ಕಾಣಿಸಿಕೊಂಡು ಜನರಿಗೆ ಆತಂಕ ಉಂಟುಮಾಡಿತ್ತು ಸ್ಥಳೀಯರು ಅರಣ್ಯ ಇಲಾಖೆಗೆ ಹಾಗೂ ಉರಗಪ್ರೇಮಿ ಸೂರಜ್ ಶೆಟ್ಟಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಬಂದ ಸೂರಜ್ ಶೆಟ್ಟಿ, ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದರು. ಈ ಸಂದರ್ಭದಲ್ಲಿ ಹರೀಶ ಮಡಿವಾಳ, ಅರಣ್ಯ ಸಿಬ್ಬಂದಿ ಶಿವಣ್ಣ ಗೌಡ ಮುಂತಾದವರು ಇದ್ದರು.

=====================================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading