ಹೆಚ್.ಪಿ.ವಿ.ಲಸಿಕಾಕರಣದ ಪ್ರಗತಿ ಕುಂಠಿತವಾದ ಕಾರಣ ತಹಶೀಲ್ದಾರ್ ಚಂದ್ರಶೇಖರ ಹೊಸಮನಿ ಅಧ್ಯಕ್ಷತೆಯಲ್ಲಿ ಶನಿವಾರ ತಾಲೂಕಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಧಾರ್ಮಿಕ ಮುಖಂಡರ ಜೊತೆಗೆ ಸಭೆ ನಡೆಯಿತು.

ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್.ಪಿ.ವಿ. ಲಸಿಕೆಯ ಕುರಿತು ತಿಳಿಸಿದರು. ಡಾ. ಗಿರೀಶ್ ಗೌಡ ತಿಮ್ಮನಗೌಡ್ರ ಹೆಚ್.ಪಿ.ವಿ. ಲಸಿಕೆಯಿಂದ ಹೆಣ್ಣು ಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣದಲ್ಲಿ ಸಹಕಾರಿಯಾಗಲಿದೆ. ಈ ಕಾಯಿಲೆ ವೈರಾಣುವಿಂದ ಹರಡವು ಕಾಯಿಲೆಯಾಗಿದ್ದು, ಕ್ಯಾನ್ಸರ್ ನಿಯಂತ್ರಣಕ್ಕೆ ಏಕೈಕ ಲಸಿಕೆ ಇದಾಗಿರುತ್ತದೆ ಕಾರಣ ಎಲ್ಲರೂ ತಮ್ಮ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಲು ತಿಳಿಸಿದರು.

ಇಲ್ಲಿಯವರೆಗೆ ರಾಜ್ಯದಲ್ಲಿ 1,45,000 ಮಕ್ಕಳಿಗೆ ಲಸಿಕೆ ನೀಡಲಾಗಿರುತ್ತದೆ, ತಾಲೂಕಿನ ಒಟ್ಟು ಗುರಿ 502, 14-15 ವರ್ಷದ ಹೆಣ್ಣು ಮಕ್ಕಳು (ಶಾಲಾ ಮಾಹಿತಿ ಪ್ರಕಾರ) ಇದ್ದು ಇಲ್ಲಿಯವರೆಗೆ 225 ಮಕ್ಕಳು ಲಸಿಕೆ ಪಡೆದಿದ್ದಾರೆ, ಯಾರಿಗೂ ಯಾವುದೇ ಅಡ್ಡ ಪರಿಣಾಮ ಆಗಿರುವುದಿಲ್ಲ. ಸಭೆಯಲ್ಲಿ ಹಾಜರಿದ್ದ ಧಾರ್ಮಿಕ ಮುಖಂಡರು ತಮ್ಮ ತಮ್ಮ ಸಂದೇಹಗಳ ಕುರಿತು ಚರ್ಚಿಸಿ ಲಸಿಕೆ ಪಡೆಯಲು ತಿಳಿಸುವುದಾಗಿ ತಿಳಿಸಿದರು.

ತಹಶೀಲ್ದಾರ್ ಚಂದ್ರಶೇಖರ ಹೊಸಮನಿ ಮಾತನಾಡಿ, ಸುಧಾಮುರ್ತಿಯವರು ಹಿಂದೆಯೇ ಸದನದಲ್ಲಿ ಹೆಚ್.ಪಿ.ವಿ. ಲಸಿಕೆಯನ್ನು ಹೆಣ್ಣು ಮಕ್ಕಳಿಗೆ ನೀಡುವ ಕುರಿತು ಚರ್ಚಿಸಿದ್ದರು. ಈ ಲಸಿಕೆಯಿಂದ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣದಲ್ಲಿ ಸಹಕಾರಿಯಾಗಲಿದೆ ಯಾವುದೇ ಸಾಮಾಜಿಕ ಮಾದ್ಯಮಗಳ ಸುಳ್ಳು ಸುದ್ದಿಗಳಿಗೆ ಕೀವಿಗೊಡದೇ ಏನಾದರೂ ಸಂದೇಹಗಳಿದ್ದಲ್ಲಿ ವೈದ್ಯರಿಂದ ಹೆಚ್ಚಿನ ಮಾಹಿತಿ ಪಡೆದು ಲಸಿಕೆ ಕೊಡಿಸುವ ಮೂಲಕ ಎಲ್ಲರೂ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ತಿಳಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಮಹೇಶ ತಾಳಿಕೋಟಿ ಸ್ವಾಗತಿಸಿ, ವಂದಿಸಿದರು

===================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading