ಯಲ್ಲಾಪುರ ತಾಲೂಕಿನ ಹುಲಗಾನ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ವರ್ಧಂತಿ ಮಹೋತ್ಸವ ಕಾರ್ಯಕ್ರಮವು ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಈ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಶುದ್ಧಿಕರ್ಮ, ಪಂಚಗವ್ಯಹೋಮ, ಶ್ರೀಲಕ್ಷ್ಮೀನರಸಿಂಹ ಜಪ, ಶ್ರೀಲಕ್ಷ್ಮೀನರಸಿಂಹ ಮೂಲಮಂತ್ರ ಹವನ, ಪುರುಷಸೂಕ್ತ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಪೂರ್ಣಾಹುತಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮಾತೆಯರಿಂದ ಭಗವದ್ಗೀತಾ ಪಠಣ, ವಿಷ್ಣು ಸಹಸ್ರನಾಮ ಪಠಣ, ಶಾಂಕರ ಸ್ತೋತ್ರಪಠಣ ನಡೆಯಿತು.
ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ತಟ್ಟಿಗದ್ದೆ, ಮೊಕ್ತೇಸರ ವೆಂಕಟ್ರಮಣ ಹೆಗಡೆ, ಅರ್ಚಕ ನರಸಿಂಹ ಭಟ್ಟ, ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಕೃಷ್ಣ ಭಟ್ಟ, ಖಜಾಂಚಿ ವಿಶ್ವನಾಥ ಭಟ್ಟ,

ಪ್ರಮುಖರಾದ ಜಿ.ಎನ್.ಭಟ್ ತಟ್ಟಿಗದ್ದೆ, ಎಸ್.ವಿ.ಭಟ್ಟ ಹುಲಗಾನ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading