ಯಲ್ಲಾಪುರ ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವವು ಏ.9 ಗುರುವಾರ ನಡೆಯಲಿದೆ.

ಈ ನಿಮಿತ್ತ ದೇವಾಲಯದಲ್ಲಿ ಬೆಳಿಗ್ಗೆ ಕಲಾವೃದ್ಧಿ ಹವನ, ಚಂಡಿಕಾ ಹವನ, ಪೂರ್ಣಾಹುತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಪೂರ್ಣಾಹುತಿ ಹಾಗೂ ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಮಧ್ಯಾಹ್ನ 4 ಗಂಟೆಗೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಧರ್ಮ ಸಭೆ ನಡೆಯಲಿದೆ, ಮುಖ್ಯ ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್ ಪ್ರಮುಖರಾದ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಹರಿಪ್ರಕಾಶ ಕೋಣೆಮನೆ, ಉಮೇಶ ಭಾಗ್ವತ್, ಪ್ರಮೋದ ಹೆಗಡೆ ಮುಂತಾದವರು ಆಗಮಿಸಲಿದ್ದಾರೆ.

ಈ ಸಮಾರಂಭದಲ್ಲಿ ದೆಹಲಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪಿ.ಎನ್.ಶಾಸ್ತ್ರಿ ಹಾಗೂ ಉಮ್ಮಚಗಿ ಪಾಠಶಾಲೆಯ ನಿವೃತ್ತ ಉಪನ್ಯಾಸಕರಾದ ನಾರಾಯಣ ಭಟ್ಟ ಮೊಟ್ಟೆಪಾಲ ಅವರನ್ನು ಸನ್ಮಾನಿಸಲಾಗುವುದು, ನಾಗರಾಜ ಗಂಗೆಮನೆಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಶಾರದಾಂಬಾ ದೇವಾಲಯದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂದು ಮಾರುತಿ ದೇವಾಲಯದಲ್ಲಿ ವರ್ಧಂತಿ ಉತ್ಸವ:

ನಾಯಕನಕೆರೆ ಶಾರದಾಂಬಾ ದೇವಾಲಯದ ಆವರಣದಲ್ಲಿರುವ ಮಾರುತಿ ದೇವಾಲಯದ ವರ್ಧಂತಿ ಉತ್ಸವವು ಇಂದು ಬುಧವಾರ ನಡೆಯುತ್ತಿದ್ದು, ನಾನಾ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading