ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನಲ್ಲಿ ರವಿವಾರ ಸಂಜೆ ನಡೆದ ಮಿನಿ ಬಸ್ ಅಪಘಾತಕ್ಕೆ ಚಾಲಕನ ಅಜಾಕರೂಕತೆಯೇ ಕಾರಣ ಎಂದು ತಿಳಿದುಬಂದಿದೆ. ಅರಬೈಲಿನಿಂದ ಬೆಳಗಾವಿಗೆ ಮದುವೆ ಸಮಾರಂಭಕ್ಕೆ ತೆರಳಿ ವಾಪಸ್ ಬರುತ್ತಿರುವಾಗ ಈ ಅಪಘಾತ ಸಂಭವಿಸಿತ್ತು.
ಈ ಘಟನೆಯಲ್ಲಿ 19 ಜನರು ಗಾಯಗೊಂಡಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಬೈಲಿನ ಕೃಷ್ಣ ನಾರಾಯಣ ನಾಯ್ಕ ಅವರು ಮಿನಿ ಬಸ್ ಚಾಲಕ ಬಾಸಲದ ಸಂದೀಪ ತಳೇಕರ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರವಿವಾರ ಸಂಜೆ 6.20 ಗಂಟೆಯ ಸಮಯದಲ್ಲಿ ಆರೋಪಿ ಚಾಲಕ ಸಂದೀಪ ತಳೇಕರ್ ಮಿನಿ ಬಸ್ಸನ್ನು ಯಲ್ಲಾಪುರ ಕಡೆಯಿಂದ ಅರಬೈಲ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡುಹೋಗುತ್ತಿರುವಾಗ ಅರಬೈಲ್ ಘಟ್ಟದ ಶೀರ್ಲೆ ಫಾಲ್ಸ್ ಕ್ರಾಸ್ ಹತ್ತಿರ ಬಸ್ಸಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್ಸು ಹೆದ್ದಾರಿ ಅಂಚಿನ ಧರೆಗೆ ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಅಪಘಾತದಲ್ಲಿ ಮಿನಿ ಬಸ್ಸಿನಲ್ಲಿದ್ದ ಅರಬೈಲಿನ ಕೃಷ್ಣ ನಾರಾಯಣ ನಾಯ್ಕ, ಸುಷ್ಮಾ ಪರಮಾನಂದ ನಾಯ್ಕ, ರೇಷ್ಮಾ ರಾಜೇಶ ನಾಯ್ಕ, ನೇಹಾಲ ಶಾಂತಾ ನಾಯ್ಕ,

ಅಖಿಲಾ ತುಳಸಿದಾಸ ಸಾವಂತ, ಸಂಧ್ಯಾ ಶಾಂತಾ ನಾಯ್ಕ, ಪುನೀತ ಶಿವಾನಂದ ನಾಯ್ಕ, ಸಮರ್ಥ ರಾಜೇಶ ನಾಯ್ಕ, ಶಿವರಾಮ ನಾರಾಯಣ ನಾಯ್ಕ, ಪ್ರಕಾಶ ವಿಶ್ವನಾಥ ನಾಯ್ಕ, ಕರ್ಣ ತುಳಸಿದಾಸ ಸಾವಂತ,

ನಮನ ಪ್ರೇಮಾನಂದ ನಾಯ್ಕ, ರೀನಾ ಪ್ರಕಾಶ ನಾಯ್ಕ, ಪ್ರಮೀಳಾ ಪ್ರಭಾಕರ ನಾಯ್ಕ, ರೇಖಾ ಮುರಳಿಧರ ನಾಯ್ಕ, ಶಾರದಾ ಕಾಶೀನಾಥ ಸಾವಂತ, ವೈಭವಿ ಪ್ರಮೋದ ನಾಯ್ಕ,

ಸಂಗೀತಾ ಪ್ರಮೋದ ನಾಯ್ಕ, ನವೀನ್ ಶಾಂತಾ ನಾಯ್ಕ ಅವರಿಗೆ ಗಾಯವಾಗಿದೆ. ಅಪಘಾತಪಡಿಸಿದ ಮಿನಿ ಬಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿನಂತಿಸಲಾಗಿದೆ.

======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading