ಯಲ್ಲಾಪುರ ಪಟ್ಟಣದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ 2026-27ನೇ ಸಾಲಿಗೆ ಶಾಲಾ ಸಂಸತ್ತಿನ ಚುನಾವಣೆ ಶನಿವಾರನಡೆಯಿತು.
ಪ್ರಧಾನ ಮಂತ್ರಿ ಸ್ಥಾನಕ್ಕೆ ನಾಲ್ಕು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಉಪ ಪ್ರಧಾನಮಂತ್ರಿ ಸ್ಥಾನಕ್ಕೆ ಎಂಟು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿದ್ದರು. ಶಾಲೆಗೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ಮತದಾರರಾಗಿ ಭಾಗವಹಿಸಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ನಡೆಸುವಂತೆ ಎಲ್ಲ ಚುನಾವಣಾ ಪ್ರಕ್ರಿಯೆಗಳನ್ನು ಹಾಗೂ ಅದರ ಕುರಿತಾದ ಮಾಹಿತಿಗಳನ್ನು ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಧಿಕಾರಿಗಳು ವಿದ್ಯಾರ್ಥಿಗಳಿಗೆ ನೀಡಿದರು.
ಶಾಲೆಯ ಸಂಸತ್ತಿಗೆ ಪ್ರಧಾನಮಂತ್ರಿಯಾಗಿ ಅಭಿಷೇಕ ನಾಯ್ಕ ಹಾಗೂ ಉಪ ಪ್ರಧಾನಿಯಾಗಿ ಪಾಂಡುರಂಗ ಶಿಂಧೆ ಆಯ್ಕೆಯಾಗಿದ್ದಾರೆ.
ಸಂವಿಧಾನದಲ್ಲಿ ಚುನಾವಣೆ ಎನ್ನುವುದು ಅತ್ಯಂತ ಪ್ರಮುಖವಾದ ಒಂದು ಘಟ್ಟ ಅದನ್ನು ಎಳೆಯ ಮಕ್ಕಳಲ್ಲಿ ತಿಳಿಸುವ ಹೊಣೆಗಾರಿಕೆಯನ್ನು ಚುನಾವಣಾ ಕ್ಲಬ್ಬಿನ ಸಂಚಾಲಕರಾದ ನೆಲ್ಸನ್ ಗೋನ್ಸಾಲ್ವಿಸ ನಿರ್ವಹಿಸಿದರು. ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ ಇತ್ಯಾದಿ ಎಲ್ಲಾ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಗಳಾಗಿ ಶಿಕ್ಷಕರು ಭಾಗವಹಿಸಿ ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಮುಖ್ಯ ಚುನಾವಣಾ ಅಧಿಕಾರಿಗಳಾಗಿ ಮುಖ್ಯಾಧ್ಯಾಪಕರಾದ ಎಂ ರಾಜಶೇಖರ ಕಾರ್ಯನಿರ್ವಹಿಸಿದರು.