ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ಗುರುವಾರ, ಶುಕ್ರವಾರ, ಶನಿವಾರ ನಡೆದ ಹಲಸು ಮೇಳ ಭರ್ಜರಿ ಯಶಸ್ಸು ಕಂಡಿದೆ. ಮೂರೂ ದಿನವೂ ಹಲಸು ಮೇಳಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಹಲಸು ಮೇಳ ಶನಿವಾರ ರಾತ್ರಿ ಮುಕ್ತಾಯಗೊಂಡಿದೆ. ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ಹಲಸು ಮೇಳ ರಾತ್ರಿ 10 ಗಂಟೆಯವರೆಗೂ ಮುಂದುವರಿಯಿತು.

ಹಲಸು ಮೇಳದಲ್ಲಿ, ಸ್ಥಳದಲ್ಲಿಯೇ ತಯಾರಿಸಿಕೊಡುತ್ತಿದ್ದ ಬಾಯಲ್ಲಿ ನೀರೂರಿಸುವ, ಬಿಸಿ,ಬಿಸಿ ಹಲಸಿನ ವಿವಿಧ ಖಾದ್ಯಗಳಿಗೆ ಜನರಿಂದ ಬಹಳ ಬೇಡಿಕೆ ಕಂಡುಬಂತು. ಹಲಸಿನ ಹಣ್ಣಿನ ಮಾರಾಟವೂ ಜೋರಾಗಿಯೇ ನಡೆಯಿತು. ಚಂದ್ರ ಹಲಸು, ವಿಯೇಟ್ಮಾಂ ಹಲಸು ಸೇರಿದಂತೆ ವಿವಿಧ ಅಪರೂಪದ ತಳಿಯ ಹಲಸಿನ ಹಣ್ಣನ್ನು ಗ್ರಾಹಕರು ಕೊಂಡುಕೊಂಡರು.

ಹಲಸು ಮೇಳದಲ್ಲಿ ವಿವಿಧ ಸ್ವದೇಶಿ ಉತ್ಪನ್ನಗಳನ್ನು ಇಡಲಾಗಿತ್ತು. ಇವುಗಳಿಗೆ ಜನರಿಂದ ಭಾರೀ ಡಿಮ್ಯಾಂಡ್ ಇತ್ತು. ಮಹಿಳೆಯರ, ಪುರುಷರ ಬಟ್ಟೆಗಳು, ಸ್ಟೇಷನರಿ ಸಾಮಾನುಗಳು, ವಿವಿಧ ತಿಂಡಿಗಳು, ಗ್ಯಾರಂಟಿ ಆಭರಣಗಳು ಗಮನ ಸೆಳೆದವು. ವಿವಿಧ ತಳಿಯ ಮಾವಿನ ಹಣ್ಣಿನ ಪ್ರದರ್ಶನ ಮತ್ತು ಮಾರಾಟ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

ಹಲಸು ಮೇಳದಲ್ಲಿ ವಿವಿಧ ತಳಿಯ ಹಲಸಿನ ಸಸಿಗಳು ಮತ್ತು ಮಾವಿನ ಸಸಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಇವುಗಳ ಖರೀದಿ ಭರಾಟೆ ಜೋರಾಗಿ ನಡೆಯಿತು.

ಒಟ್ಟಿನಲ್ಲಿ ಹಲಸು ಮೇಳದ ಆಯೋಜಕರು ಯಲ್ಲಾಪುರದಲ್ಲಿ ಹಲಸು ಮೇಳಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡರು. ಹಲಸು ಮೇಳಕ್ಕೆ ಬಂದ ಅಸಂಖ್ಯಾತ ಜನರೂ ಸಹ ಫುಲ್ ಖುಷಿಗೊಂಡರು. ಹಲಸು ಮೇಳ ಯಲ್ಲಾಪುರದಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಶನಿವಾರ ರಾತ್ರಿ ತೆರೆಕಂಡಿತು.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading