ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂ.27 ಶನಿವಾರ ಸಂಜೆ 5.30ರಿಂದ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಲಿದೆ.

ಟೌನ್ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಪುನರಾಯ್ಕೆಯಾದ MJF ಶೇಷಗಿರಿ ಪ್ರಭು ಹಾಗೂ ಇತರ ಪದಾಧಿಕಾರಿಗಳಿಗೆ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ MJF ಸುದೇಶ ಬೋರ್ಕರ್ ಪ್ರಮಾಣ ವಚನ ಬೋಧಿಸುವರು. ಡಿಸ್ಟ್ರಿಕ್ ಜಿ.ಎಲ್.ಟಿ. ಕೋಆರ್ಡಿನೇಟರ್ PMJF ಡಾ.ಅಶೋಕ ಹೆಗಡೆ ಇಂಡಕ್ಷನ್ ಆಫೀಸರ್ ಆಗಿ ಪಾಲ್ಗೊಳ್ಳುವರು. ಲಯನ್ಸ್ ಕ್ಲಬ್ ಪದಾಧಿಕಾರಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ 2025-26 ಸಾಲಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ MJF ಶೇಷಗಿರಿ ಪ್ರಭು ಅವರು 2026-27 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ. ಶೇಷಗಿರಿ ಪ್ರಭು ಅವರ ಅಧ್ಯಕ್ಷತೆಯಲ್ಲಿ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಮಾದರಿಯಾಗಿ ಕಾರ್ಯನಿರ್ವಹಿಸಿತ್ತು. ಇವರ ಅವಧಿಯಲ್ಲಿ ನಡೆದ ಲಯನ್ಸ್ ಕ್ಲಬ್‍ನ ಸೇವಾ ಕೈಂಕರ್ಯಗಳಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು. ಉತ್ತಮ ಕಾರ್ಯಚಟುವಟಿಕೆ ನಡೆಸಿದ ಸಂಸ್ಥೆ ಎಂಬ ಪ್ರಶಸ್ತಿಯೂ ಸಹ ದೊರೆತಿದೆ.

ನೂತನ ಸಮೀತಿಯಲ್ಲಿ ಕಾರ್ಯದರ್ಶಿಯಾಗಿ ಮೋಹನ ರೇವಣ್ಕರ್, ಖಜಾಂಚಿಯಾಗಿ ರವಿರಾಜ ಪ್ರಭು, IPP ಯಾಗಿ ಮಂಜುನಾಥ ನಾಯ್ಕ, ಕ್ಲಬ್ ಅಡ್ಮಿನ್ ಆಗಿ ಸುರೇಶ ಭಟ್ಟ, ಉಪಾಧ್ಯಕ್ಷರಾಗಿ ಅಕ್ತರ್ ಅಲಿ ಶೇಖ್, ಮೆಂಬರ್ ಶಿಪ್ ಚೆರ್ಮನ್ ಆಗಿ ನಂದನ ಬಾಳಗಿ ಹಾಗೂ ವಿವಿಧ ಹುದ್ದೆಗಳಿಗೆ ವಿನಯಾ ಪ್ರಭು, ಸುನಂದಾ ಪಾಟಣಕರ್, ಗೋಪಾಲ ನೇತ್ರೇಕರ್ ಆಯ್ಕೆಯಾಗಿದ್ದಾರೆ.

====================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading