ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರಿಂದ ಯಲ್ಲಾಪುರ ತಾಲೂಕಿನ ಬಿಸಗೋಡ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಯಕ್ಷದೀಕ್ಷೆ ಹೆಸರಿನ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಗುರುವಾರ ನಡೆಯಿತು.

ಕೆರೆಮನೆ ಯಕ್ಷಗಾನ ಕೇಂದ್ರದ ಸಂಚಾಲಕ, ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಕ್ಕಳಲ್ಲಿ ನಮ್ಮ ನೆಲದ ಶ್ರೇಷ್ಠ ಕಲೆಯಾದ ಯಕ್ಷಗಾನದ ಸಂಸ್ಕಾರವನ್ನು ಬಿತ್ತುವ ಉದ್ದೇಶದಿಂದ ತಮ್ಮ ಮಂಡಳಿ ಹಲವರ ಸಹಾಯದಿಂದ ಪ್ರೌಢಶಾಲೆಗಳಲ್ಲಿ ವಾರಕ್ಕೆರಡು ಅವಧಿಯಲ್ಲಿ ಯಕ್ಷಗಾನ ತರಬೇತಿ ನೀಡಲು ಮುಂದಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಅವರು ಮಕ್ಕಳಿಗೆ ತಾಳಾಭ್ಯಾಸವನ್ನು ಸಾಂಕೇತಿಕವಾಗಿ ನಡೆಸಿಕೊಟ್ಟರು.

ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಗಣಪತಿ ಅಗ್ಗಾಶಿಕುಂಬ್ರಿ ಶಾಲು ಹೊದೆಸಿ ಸತ್ಕರಿಸಿದರು. ನಿವೃತ್ತ ಕಲಾಶಿಕ್ಷಕ ಸತೀಶ ಯಲ್ಲಾಪುರ ಪರಿಚಯಿಸಿದರು. ಮುಖ್ಯಾಧ್ಯಾಪಕಿ ನೂತನಾ ನಾಯಕ ಸ್ವಾಗತಿಸಿದರು. ಯಕ್ಷಗಾನ ಕಲಾವಿದ ಸದಾಶಿವ ಮಲವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಹೆಗಡೆ ನಿರ್ವಹಿಸಿದರು. ಶಿಕ್ಷಕ ಸದಾನಂದ ದಬಗಾರ ವಂದಿಸಿದರು.

=======================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading