ಖ್ಯಾತ ಭರತನಾಟ್ಯ ಕಲಾವಿದೆ, ವಿದುಷಿ ಸುಮಾ ಹೆಗಡೆ ತೊಂಡೆಕೆರೆಯವರ ಪುತ್ರಿ, ಭರತನಾಟ್ಯ ಕಲಾವಿದೆ ವಿದುಷಿ ಕೃಪಾ ಹೆಗಡೆಯವರ ಭರತನಾಟ್ಯ ರಂಗ ಪ್ರವೇಶ ಸಮಾರಂಭವು ಡಿ.6 ಶನಿವಾರ ಸಂಜೆ 4.30 ಗಂಟೆಗೆ ಯಲ್ಲಾಪುರ ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಭಾರತಿ ನೃತ್ಯ ಕಲಾ ಕೇಂದ್ರ ಯಲ್ಲಾಪುರ ಹಾಗೂ ಕಾಜಿನಮನೆ ಕುಟುಂಬ ಸಿದ್ದಾಪುರ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕೃಪಾ ಹೆಗಡೆ

ಖ್ಯಾತ ಸಿನಿಮಾ ನಟ ರಾಮಕೃಷ್ಣ ನೀರ್ನಳ್ಳಿ, ಶಾಸಕ ಶಿವರಾಮ ಹೆಬ್ಬಾರ್, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಶುಭಾಶಯ ನುಡಿಗಳನ್ನು ಆಡಲಿದ್ದಾರೆ. ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಡಾ.ಶ್ರೀಧರ ಭಟ್ಟ ಉಜಿರೆ, ವಿನಾಯಕ ಪೈ, ಗಣೇಶ ಭಟ್ಟ ಕಾಜಿನಮನೆ, ವಿದುಷಿ ಸೀಮಾ ಭಾಗ್ವತ್, ನೃತ್ಯ ಗುರು ಎಂ.ಗೋಪಾಲ, ನಿರಂಜನ ಭಟ್ಟ ಬೆಂಗಳೂರು ಮುಂತಾದವರು ಭಾಗವಹಿಸಲಿದ್ದಾರೆ.

ಮಂಜುನಾಥ ಎನ್ ಪುತ್ತೂರು ನೃತ್ಯ ನಿರ್ದೇಶನ ನೀಡಲಿದ್ದು, ನಟುವಾಂಗದಲ್ಲಿ ವಿದುಷಿ ಸುಮಾ ವೆಂಕಟ್ರಮಣ, ಹಾಡುಗಾರಿಕೆಯಲ್ಲಿ ವಿ.ಬಾಲಸುಬ್ರಹ್ಮಣ್ಯ ಬೆಂಗಳೂರು, ಮೃದಂಗವಾದನದಲ್ಲಿ ವಿ.ವೇಣುಗೊಪಾಲ ಬೆಂಗಳೂರು, ಕೊಳಲಿನಲ್ಲಿ ವಿ.ದೀಪಕ ಹೆಬ್ಬಾರ್ ಬೆಂಗಳೂರು, ರಿದಮ್ ಪ್ಯಾಡ್ ನಲ್ಲಿ ವಿ. ರಾಘವೇಂದ್ರ ರಂಗದೋಳ್ ಶಿವಮೊಗ್ಗ ಪಾಲ್ಗೊಳ್ಳಲಿದ್ದಾರೆ.

ವಿದುಷಿ ಸುಮಾ ಹೆಗಡೆ, ವಿ.ಟಿ.ಹೆಗಡೆ ತೊಂಡೆಕೆರೆ

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಂಘಟಕರಾದ ವಿದುಷಿ ಸುಮಾ ಹೆಗಡೆ, ವಿ.ಟಿ.ಹೆಗಡೆ ತೊಂಡೆಕೆರೆ, ಗುರುನಾಥ ಭಟ್ಟ ಕಾಜಿನಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading