ವಿದ್ಯುತ್ ಚಾಲಿತ ಮಜ್ಜಿಗೆ ಕಡೆಯುವ ಯಂತ್ರದಲ್ಲಿ ಮಜ್ಜಿಗೆ ಕಡೆಯುವಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಬಿಸಗೋಡ ಸಮೀಪದ ನಾಗರಖಾನ ಗ್ರಾಮದಲ್ಲಿ ಬುಧವಾರ ನಡೆದಿದೆ.

ಬುಧವಾರ ಮಧ್ಯಾಹ್ನ 12.30 ಗಂಟೆಯಿಂದ 12.35 ಗಂಟೆಯ ಸಮಯದಲ್ಲಿ ನಾಗರಖಾನಿನ ನಿವಾಸಿ 73 ವರ್ಷದ ವಿಶ್ವೇಶ್ವರ ವೆಂಕಟ್ರಮಣ ಭಟ್ಟ ಎಂಬುವವರು ತಮ್ಮ ಮನೆಯಲ್ಲಿ ವಿದ್ಯುತ್ ಚಾಲಿತ ಮಜ್ಜಿಗೆ ಕಡೆಯುವ ಯಂತ್ರದಿಂದ ಮಜ್ಜಿಗೆ ಕಡೆಯುತ್ತಿರುವಾಗ ಆಕಸ್ಮಿಕವಾಗಿ ಮನೆಯ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿದ್ದಾರೆ.

ಈ ಮರಣದಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮೃತ ವ್ಯಕ್ತಿಯ ಮಗ ಗಣಪತಿ ವಿಶ್ವೇಶ್ವರ ಭಟ್ಟ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading