ಮನೆಯ ಗೇಟ್ ಎದುರು ನಿಲ್ಲಿಸಿಟ್ಟ ಸ್ಕೂಟಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಎಂ.ಎಚ್.ನಾಯ್ಕ ಕಾಂಪೌಂಡ್ ಸಮೀಪದ ನಿವಾಸಿ, ಅಡಿಕೆ ವ್ಯಾಪಾರಿ ರಾಘವೇಂದ್ರ ಮಹಾಬಲೇಶ್ವರ ಭಟ್ಟ ಎಂಬುವವರು ತಮ್ಮ ಮನೆಯ ಗೇಟಿನ ಎದುರು ನಿಲ್ಲಿಸಿಟ್ಟ ಕಪ್ಪು ಬಣ್ಣದ ಜುಪಿಟರ್ ಸ್ಕೂಟಿಯು ಕಳೆದ ಅ.10 ರಂದು ಕಳ್ಳತನವಾಗಿತ್ತು.

ಈ ಬಗ್ಗೆ ರಾಘವೇಂದ್ರ ಭಟ್ಟ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸ್ಕೂಟಿ ಕದ್ದ ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹಳಿಯಾಳ ಕ್ರಾಸ್ ಸಮೀಪದ ನಿವಾಸಿ, ಕೂಲಿ ಕೆಲಸದ ಪ್ರಕಾಶ ಸಿದ್ದಿ ಎಂದು ಗುರುತಿಸಲಾಗಿದೆ.

ತನ್ನ ಸಹಚರನೊಂದಿಗೆ ಸೇರಿಕೊಂಡು ಸ್ಕೂಟಿಯನ್ನು ಕಳ್ಳತನ ಮಾಡಿರುವುದನ್ನು ಆರೋಪಿಯು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಕಳ್ಳತನವಾದ ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading