




26-12-2025 ಶುಕ್ರವಾರ ಯಲ್ಲಾಪುರ
ಸಂಗೀತ ಮತ್ತು ಕ್ರೀಡೆಯಿಂದ ಮನಶಾಂತಿ: ಆರ್. ವಿ ದೇಶಪಾಂಡೆ

ದಿನನಿತ್ಯ ಉದ್ಯೋಗದಲ್ಲಿ ಒತ್ತಡದಲ್ಲಿ ತೊಡಗಿಕೊಂಡು ಜೀವನ ಸಾಗಿಸದೇ, ಪ್ರತಿ ದಿನ ಸಂಗೀತ ಕೇಳುವುದರಿಂದ ಮನಶಾಂತಿ ದೊರೆಯಲಿದೆ. ಆರೋಗ್ಯ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಎದುರಿಸಲು ಮತ್ತು ದಣಿವು ಮರೆಮಾಡುಲು ಸಂಗೀತದಿಂದ ಸಾಧ್ಯ, ನಾನು ಕೂಡ ಪ್ರತಿ ದಿನ ಸಂಜೆ ಸಂಗೀತ ಕೇಳುತ್ತೇನೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂದು ಆರ್ ವಿ ದೇಶಪಾಂಡೆ ಹೇಳಿದರು.
ಅವರು ಶುಕ್ರವಾರ ಕಾರವಾರದ ರವೀಂದ್ರನಾಥ್ ಠಾಗೋರ್ ಕಡಲ ತೀರದ, ಮಯೂರ ವರ್ಮ ವೇದಿಕೆಯಲ್ಲಿ ಅಯೋಜಿದ್ದ ಕರಾವಳಿ ಉತ್ಸವದಲ್ಲಿ ಮಾತನಾಡಿದರು.

ಸಂಗೀತದಷ್ಟೇ ಕ್ರೀಡೆಯಲ್ಲಿ ತೊಡಗಿಕೊಳ್ಳಿ, ಜೀವನ ಸ್ಪರ್ಧಾತ್ಮಕವಾಗಿದ್ದು ಕೆಲವೊಮ್ಮೆ ಯಶಸ್ಸು, ಸೋಲು ಇದ್ದೇ ಇರುತ್ತದೆ. ಆದರೇ ಜೀವನದಲ್ಲಿ ಗುರಿ ಮಾತ್ರ ಬಿಡಬಾರದು. ಮಾನವನಾಗಿ ಹುಟ್ಟಿದ ಮೇಲೆ ಮಾನವನಾಗಿ ಬಾಳಬೇಕು. ಮಾನವನಿಗೆ ಕ್ರೀಡೆ, ಸಂಗೀತ ಮನರಂಜನೆ ಅಭಿರುಚಿ ಇರಬೇಕು. ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ ಕ್ರೀಡೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಎಂದರು.
ಜಿಲ್ಲೆಯಲ್ಲಿ ಕರಾವಳಿ ಉತ್ಸವವನ್ನು ಮೊದಲ ಬಾರಿಗೆ 1992 ರಲ್ಲಿ ಆರಂಭಿಸಲಾಯಿತು ಈ ಉತ್ಸವದಲ್ಲಿ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಸಾರ್ವಜನಿಕರು ಭಾಗವಹಿಸುತ್ತಾರೆ.
ಕರಾವಳಿ ಉತ್ಸವ ಆರಂಭಗೊಂಡು ಮಧ್ಯದಲ್ಲಿ ಕೆಲ ಕಾಲ ಸ್ಥಗಿತವಾಗಿದ್ದು ಮತ್ತೆ ಈ ವರ್ಷ 18 ನೇ ಕರಾವಳಿ ಉತ್ಸವವನ್ನು ಆಚರಿಸಲಾಗುತ್ತಿದೆ. ಕರಾವಳಿ ಉತ್ಸವ ಈ ವರ್ಷ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಸಿಇಓ, ಪೊಲೀಸ್ ವರಿಷ್ಠಾಧಿಕಾರಿ, ಎಲ್ಲಾ ಇಲಾಖೆಯ ಅಧಿಕಾರಿಗಳು, ಕಲಾವಿದರು ಮತ್ತು ಸಾರ್ವಜನಿಕರ ಸಹಕರದಿಂದ ವಿಜೃಂಭಣೆಯಿಂದ ನಡೆಯುತ್ತಿದೆ. ಇದು ನಿರಂತರವಾಗಿ ನಡೆಯಲಿ ಎಂದರು.
ಆಧುನಿಕ ಕಾಲದಲ್ಲಿ ಜನರ ನೆಮ್ಮದಿ, ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ ಆದರಿಂದ ಪ್ರತಿಯೊಬ್ಬರು ಕ್ರೀಡೆ, ಸಂಗೀತಾ, ಮನರಂಜನೆಯಲ್ಲಿ ಅಭಿರುಚಿ ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್ ಶಶಿ, ಪೊಲೀಸ್ ವರಿಷ್ಠಾಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ತರಬೇತಿ ನಿರತ ಐ ಎ ಎಸ್ ಅಧಿಕಾರಿ ಝೂಪಿಷನ್ ಹಕ್, ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೆಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಬಿ. ಎನ್ ವಾಸರೆ, ತಾಲೂಕು ಅಧ್ಯಕ್ಷ ರಾಮ ನಾಯ್ಕ, ಜಿಲ್ಲೆಯ ಸಾಹಿತಿಗಳು, ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು.
ಬೈಕಿಗೆ ಕಾರು ಡಿಕ್ಕಿ: ಬೈಕ್ ಸವಾರನಿಗೆ ಗಾಯ

ಅತೀ ವೇಗವಾಗಿ ಚಲಾಯಿಸಿಕೊಂಡುಬಂದ ಕಾರೊಂದು ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಬಿದ್ರಳ್ಲಿ ಕ್ರಾಸ್ ಸಮೀಪ ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ನಡೆದಿದೆ. ಅಪರಿಚಿತ ಕಾರು ಚಾಲಕ ತನ್ನ ಬಿಳಿ ಬಣ್ಣದ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಚಲಾಯಿಸಿಕೊಂಡು ಬಂದವನು, ತಾಲುಕಿನ ಮಂಚಿಕೇರಿ-ಉಮ್ಮಚಗಿ ಮಧ್ಯೆ ಬಿದ್ರಳ್ಲಿ ಕ್ರಾಸ್ ಸಮೀಪ ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ನಾಗರಾಜ ಎಂಬಾತನ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ರಸ್ತೆಗೆ ಬಿದ್ದು, ಬೈಕ್ ಸವಾರ ನಾಗರಾಜನಿಗೆ ಗಾಯವಾಗಿದೆ. ಬೈಕ್ ಜಕಂಗೊಂಡಿದ್ದು, ಕಾರು ಚಾಲಕನು ಕಾರನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದಾನೆ. ಕಾರು ಚಾಲಕನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಾಯಾಳು ನಾಗರಾಜನ ಮಾವ ಮಂಚಿಕೇರಿಯ ರಾಮಪ್ಪ ಬೋವಿವಡ್ಡರ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲ್ Subscribe ಮಾಡಿ : https://bit.ly/e-yellapur_digital_news
E YELLAPUR -FACE BOOK PAGE FOLLOW ಮಾಡಿ – https://www.facebook.com/eyellapur
ನಮ್ಮ FACE BOOK GROUP JOIN ಆಗಿ https://www.facebook.com/groups/593852164946589
LATEST NEWS






















