ಯಲ್ಲಾಪುರ ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಾಲಯದ ಸಭಾಭವನದಲ್ಲಿ ಜ.15 ಗುರುವಾರ ಸಂಕ್ರಾಂತಿ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.

ಗುರುವಾರ ರಾತ್ರಿ 11 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯ ವರೆಗೆ ಖ್ಯಾತ ಕಲಾವಿದರಿಂದ ಸಂಗೀತ ರಸಧಾರೆ ಪ್ರಸ್ತುತವಾಗಲಿದೆ. ಪ್ರಸಿದ್ಧ ಯಕ್ಷಗಾನ ಭಾಗವತರಾದ ವಿ.ಗಣಪತಿ ಭಟ್ಟ ಮೊಟ್ಟೆಗದ್ದೆ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಗಾಯನದಲ್ಲಿ ವಾಣಿ ಹೆಗಡೆ ಯಲ್ಲಾಪುರ, ಗೋಪಾಲಕೃಷ್ಣ ಭಾಗ್ವತ್ ಅಣಲಗಾರ, ಬಸವರಾಜ ವಂದಲಿ ಧಾರವಾಡ, ಸಂಗೀತಾ ಹೆಗಡೆ ಗಿಳಿಗುಂಡಿ, ರಿಷಿಕೇಷ ಅರಬಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ. ಸಾರಂಗಿಯಲ್ಲಿ ಗುರುಪ್ರಸಾದ ಹೆಗಡೆ ಗಿಳಿಗುಂಡಿ, ತಬಲಾ ಸೋಲೋದಲ್ಲಿ ಡಾ.ಶ್ರೀಪತಿ ದಿಗ್ಗಾವಿ, ಸಿತಾರ್ ವಾದನದಲ್ಲಿ ಶೃತಿ ದಿಗ್ಗಾವಿ ಪಾಲ್ಗೊಳ್ಳಲಿದ್ದಾರೆ. ಹಾರ್ಮೋನಿಯಂ ವಾದನದಲ್ಲಿ ಸತೀಶ ಹೆಗ್ಗಾರ, ತಬಲಾ ವಾದನದಲ್ಲಿ ಗಣೇಶ ಗುಂಡ್ಕಲ್, ರಾಜೇಂದ್ರ ಭಾಗ್ವತ್, ಪ್ರದೀಪ ಕೋಟೆಮನೆ ಭಾಗವಹಿಸಲಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading