ಕರ್ನಾಕಟ ಶಿಲ್ಪಾಕಲಾ ಅಕಾಡೆಮಿಯ 2025 ನೇ ಸಾಲಿನ ಗೌರವ ಪ್ರಶಸ್ತಿಗೆ ಯಲ್ಲಾಪುರ ಪಟ್ಟಣದ ಬಿಕ್ಕು ಗುಡಿಗಾರ ಕಲಾಕೇಂದ್ರದ ಶಿಲ್ಪಿ ಅರುಣ ಗುಡಿಗಾರ ಆಯ್ಕೆಯಾಗಿದ್ದಾರೆ.

ಅರುಣ ಗುಡಿಗಾರ

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಮಾರ್ಚ ತಿಂಗಳಿನಲ್ಲಿ ಗೌರವ ಪುರಸ್ಕೃತರಿಗೆ ತಲಾ ರೂ. 50,000 ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಕಳೆದ ಅನೇಕ ದಶಕಗಳಿಂದ ಅರುಣ ಗುಡಿಗಾರ ಅವರು ಕಾಷ್ಠಶಿಲ್ಪ, ಶಿಲಾ ವಿಗ್ರಹಗಳ ರಚನೆ ಸೇರಿದಂತೆ ಸಾಂಪ್ರದಾಯಿಕ ಶಿಲ್ಪಕಲಾ ಪ್ರಕಾರಗಳಲ್ಲಿ ತಮ್ಮ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಮಣ್ಣಿನ ಗಣೇಶ ವಿಗ್ರಹಗಳ ರಚನೆ, ಆಕರ್ಷಕ ವಿಗ್ರಹಗಳ ಕೆತ್ತನೆ, ಮರದ ಕಲಾಕೃತಿಗಳ ರಚನೆಯಲ್ಲಿ ಇವರು ನಿರಂತರವಾಗಿ ತೊಡಗಿಕೊಂಡಿದ್ದಾರೆ.

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading