
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅದ್ಭುತ ಅವಕಾಶ ಇಲ್ಲಿದೆ: ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜು ಕುಮಟಾ

ಖ್ಯಾತ ವೈದ್ಯರಾದ ಡಾ. ಜಿ. ಜಿ. ಹೆಗಡೆ ಅವರ ದೂರದೃಷ್ಟಿ ಮತ್ತು ಸತತ ಪ್ರಯತ್ನದಿಂದ ಕುಮಟಾದ ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡುತ್ತಾ ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಬೋಧಕ ಸಿಬ್ಬಂದಿಗಳ ಒಗ್ಗಟ್ಟಿನ ಶ್ರಮದಿಂದ ಸಂಸ್ಥೆ ದಿನದಿಂದ ದಿನಕ್ಕೆ ಶೈಕ್ಷಣಿಕವಾಗಿ ಇನ್ನಷ್ಟು ಎತ್ತರಕ್ಕೇರುತ್ತಿದೆ.

ಈ ಕಾಲೇಜಿನಲ್ಲಿರುವ ಸುಸಜ್ಜಿತ ವಸತಿ ವ್ಯವಸ್ಥೆ, ಪೌಷ್ಟಿಕ ಆಹಾರ, ಆರೋಗ್ಯದ ಬಗ್ಗೆ ಸಮಯೋಚಿತ ಕಾಳಜಿ, ವಿದ್ಯಾರ್ಥಿಗಳ ಕಲಿಕೆಯ ಸಮಸ್ಯೆಗಳಿಗೆ ಸ್ಟಡಿ ಅವರ್ಸ್ ಮೂಲಕ ಪರಿಹಾರ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ನಿರಂತರ ತರಬೇತಿ ಈ ಎಲ್ಲವೂ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕಾರಣವಾಗಿವೆ.

ಅತ್ಯಂತ ಕೈಗೆಟುಕುವ ದರದಲ್ಲಿ ಗುಣಮಟ್ಟದ ಪಿ.ಯು ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ತರಬೇತಿಯನ್ನು ನೀಡುತ್ತಿರುವ ಕೆನರಾ ಎಕ್ಸಲೆನ್ಸ್ ವಿದ್ಯಾಲಯವು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಭವಿಷ್ಯದ ಭರವಸೆಯ ಬೆಳಕಾಗಿ ನಿಂತಿದೆ.

ಪ್ರಸಕ್ತ ವರ್ಷದ ಧಾಖಲಾತಿ ಪ್ರಾರಂಭವಾಗಿದೆ ನಿಮ್ಮ ಮಕ್ಕಳ ಭವ್ಯ ಭವಿಷ್ಯಕ್ಕೆ ಇಂದೇ ಭೇಟಿ ನೀಡಿ ನಿಮ್ಮ ಮಕ್ಕಳ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9663119845, 9986580703, 9449477473,
8951552350
ಇತ್ತಿಚೆಗೆ ಪ್ರಕಟವಾದ ದ್ವಿತೀಯ ಪಿ.ಯು.ಸಿ ಪರೀಕ್ಷಾ ಫಲಿತಾಂಶದಲ್ಲಿ ನಮ್ಮ ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜು ಅತ್ಯುತ್ತಮ ಸಾಧನೆ ಮಾಡಿ ಹೆಮ್ಮೆಯನ್ನು ತಂದಿದೆ. ಮಹಾಲಕ್ಷ್ಮಿ ಪಿ. ಹೆಗಡೆ 600 ಅಂಕಗಳಿಗೆ 591 ಅಂಕಗಳನ್ನು ಪಡೆದು ರಾಜ್ಯದಲ್ಲಿ 9ನೇ ಸ್ಥಾನ ಗಳಿಸಿರುವುದು ಸಂಸ್ಥೆಗೆ ಅಪಾರ ಗೌರವ ತಂದಿದೆ.

ಜಿಲ್ಲೆಯ ಮೊದಲ ವಸತಿ ಸಹಿತ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ಕಾಲೇಜು, ಕಳೆದ 5 ವರ್ಷಗಳಿಂದ ಸತತವಾಗಿ ಪಿ.ಯು. ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ‍್ಯಾಂಕ್‌ಗಳನ್ನು ಗಳಿಸುತ್ತಾ, ಶಿಕ್ಷಣದ ಗುಣಮಟ್ಟಕ್ಕೆ ಜೀವಂತ ಸಾಕ್ಷಿಯಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿಸುತ್ತಿದ್ದು, IIEST ಹಾಗೂ MBBS ಸೀಟ್‍ಗಳನ್ನು ಪಡೆದು ತಮ್ಮ ಭವಿಷ್ಯವನ್ನು ದೃಢಪಡಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ನಡೆಸುವ ಕೆಸಿಇಟಿ ಪರೀಕ್ಷೆಯಲ್ಲಿ ಸಹ ನಮ್ಮ ವಿದ್ಯಾರ್ಥಿಗಳು 1000 ರ‍್ಯಾಂಕ್ ಒಳಗೆ ಸ್ಥಾನ ಪಡೆದು R.V. ಹಾಗೂ M.S. ರಾಮಯ್ಯಂತಹ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.
ಇಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ ಯೋಗ ಮತ್ತು ಧ್ಯಾನ, ಜೊತೆಗೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಸಮರ್ಪಕ ಅವಕಾಶ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಒತ್ತಡವಿಲ್ಲದೆ ಸಂತಸದಿಂದ ಕಲಿಯುವ ಪರಿಸರ ನಿರ್ಮಾಣವಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಟಿವಿ ಮತ್ತು ಸೋಶಿಯಲ್ ಮೀಡಿಯಾದ ಆಕರ್ಷಣೆಯಿಂದ ದೂರವಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿಸುತ್ತಿರುವುದು ಪಾಲಕರಿಗೂ ಹಾಗೂ ಶಿಕ್ಷಣ ಪ್ರೇಮಿಗಳಿಗೆ ಸಂತಸ ತಂದಿದೆ.
ಹೆಚ್ಚಿನ ಮಾಹಿತಿಗಾಗಿ/ ಪ್ರವೇಶಾತಿಗಾಗಿ ಸಂಪರ್ಕಿಸಿ : 9663119845, 9986580703, 9449477473, 8951552350
ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸಾಧನೆ ಸಂಸ್ಥೆಯ ಹೆಮ್ಮೆಯ ಗುರುತಾಗಿದೆ.
JEE ಫಲಿತಾಂಶದಲ್ಲಿ ದಾಖಲೆಯ ಸಾಧನೆ

ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ, ಯಲ್ಲಾಪುರ ಪಟ್ಟಣದ ನಾಯಕನಕೆರೆಯ ದಿಶಾ ಅಶೋಕ ಹೆಗಡೆ JEE (main) ಫಲಿತಾಂಶದಲ್ಲಿ ಶೇ.99.20 ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾಳೆ. ಇಂತಹ ಅನೆಕ ಮಹತ್ವದ ಸಾಧನೆ ಮಡಲು ಪ್ರೋತ್ಸಾಹ, ಪ್ರೇರಣೆ, ತರಬೇತಿ ಈ ಕಾಲೇಜಿನಲ್ಲಿ ಲಭ್ಯ ಇದೆ.

ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಪಾಠ ಮಾಡುವುದರ ಜೊತೆಗೆ ಸಂಪೂರ್ಣ ಎರಡು ವರ್ಷ ನೀಟ್ ,ಜೆಇಇ ಮತ್ತು ಸಿಇಟಿ ಸಿಎ,ಸಿಎಸ್ ಫೌಂಡೇಶನ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಆಯಾ ಕ್ಷೇತ್ರಗಳ ವಿಶೇಷ ಪರಿಣಿತ ತಜ್ಞರಿಂದ ಕೊಡಲಾಗುತ್ತಿದೆ. ತರಗತಿಯ ವೇಳೆ ನಂತರ ಸಂಜೆ ಅಧ್ಯಯನಕ್ಕೆ ಮೀಸಲಾದ ವೇಳೆಯಲ್ಲಿ ಶಿಕ್ಷಕರು ಮಕ್ಕಳನ್ನು ವಿಶೇಷ ರೀತಿಯಲ್ಲಿ ಪರೀಕ್ಷೆಗೆ ತರಬೇತಿ ನೀಡಿ ಸಿದ್ಧಗೊಳಿಸುತ್ತಾರೆ.

ಕೇವಲ ಓದು ಮಾತ್ರವಲ್ಲ ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ ಧಾರ್ಮಿಕ ಮೌಲ್ಯಗಳ ಸಂಸ್ಕಾರಗಳಾದ ಯೋಗ, ಧ್ಯಾನ, ಪ್ರಾಣಾಯಾಮ, ಭಜನೆ,ಶ್ಲೋಕ, ಭಗವದ್ಗೀತಾ ಪಠಣ ಕ್ರೀಡೆ, ಸಾಂಸ್ಕøತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುವ ಅವಕಾಶ ಕಲ್ಪಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡಿರುತ್ತಾರೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನೂ ನೀಡಲಾಗುತ್ತದೆ.

ಉತ್ತಮ ಊಟ ವಸತಿಯ ಜೊತೆ ವೈದ್ಯಕೀಯ ಕಾಳಜಿಯೂ ಇದೆ. ಭವ್ಯ ಭಾರತದ ಭವಿಷ್ಯದ ಪ್ರಜೆಗಳಾದ, ಇಂದಿನ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ಆಧುನಿಕ ಶಿಕ್ಷಣದ ಜೊತೆ ನಮ್ಮ ಸಂಸ್ಕೃತಿ ಸಭ್ಯತೆಗಳನ್ನು ಜತನವಾಗಿ ಜೋಡಿಸಿ ಕೊಡುವ ಪಿ ಯು ಶಿಕ್ಷಣ ವ್ಯವಸ್ಥೆಯು ಜಿಲ್ಲೆಯಲ್ಲಿ ಕೈಗೆಟುಕುವ ದರದಲ್ಲಿ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜ ಗೋರೆಯಲ್ಲಿ ಲಭ್ಯವಾಗುತ್ತಿದೆ.

ವಿದ್ಯಾರ್ಥಿಗಳ ಪಿಯುಸಿ ಫಲಿತಾಂಶವನ್ನು ಅವರ ಎಸ್.ಎಸ್.ಎಲ್.ಸಿ ಫಲಿತಾಂಶದೊಂದಿಗೆ ಹೋಲಿಕೆ ಮಾಡಿದಾಗ, ಹತ್ತಾರು ವಿದ್ಯಾರ್ಥಿಗಳಲ್ಲಿ ಗಮನಾರ್ಹವಾದ ಉತ್ತಮ ಬದಲಾವಣೆ ಕಂಡುಬರುತ್ತದೆ. ಇದಕ್ಕಿಂತ ಉತ್ತಮ ಸಾಕ್ಷಿ ಇನ್ನೇನು ಬೇಕು ಈ ಸಂಸ್ಥೆಯ ಶಿಕ್ಷಣದ ಗುಣಮಟ್ಟವನ್ನು ಅರಿಯಲು.

ನಿರಂತರ ಮಾರ್ಗದರ್ಶನ, ನಿಯಮಿತ ಪರೀಕ್ಷೆಗಳು, ಸುಸಜ್ಜಿತ ಲ್ಯಾಬ್ ಸೌಲಭ್ಯಗಳು ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ಇವೆಲ್ಲವೂ ವಿದ್ಯಾರ್ಥಿಗಳ ಸಾಧನೆಗೆ ಬಲವಾದ ಆಧಾರವಾಗಿವೆ.

ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜಿನಲ್ಲಿ ಉತ್ತಮ ವಸತಿ ನಿಲಯ ವ್ಯವಸ್ಥೆ, ಪೌಷ್ಟಿಕ ಆಹಾರ, ಪಾಲಕರಿಗೆ ನಿಯಮಿತ ಭೇಟಿ ಅವಕಾಶ ಸೇರಿದಂತೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಲಭ್ಯವಿವೆ.
ಇನ್ನಷ್ಟು ಮಾಹಿತಿಗಾಗಿ ಸಂಪರ್ಕಿಸಿ:
9663119845, 87923 16456

.
Sponsered





























