ಎಸ್.ಎಸ್.ಎಲ್.ಸಿ.ಯ ನಂತರದ ವಿದ್ಯಾರ್ಥಿ ಜೀವನದಲ್ಲಿ ಮುಂದಿನ ಶಿಕ್ಷಣದ ಆಯ್ಕೆ ಅತ್ಯಂತ ಮಹತ್ವದ್ದಾಗಿರುತ್ತದೆ. ಎಸ್.ಎಸ್.ಎಲ್.ಸಿ.ನಂತರದ ಶಿಕ್ಷಣದ ಸೂಕ್ತ ಆಯ್ಕೆ ವಿದ್ಯಾರ್ಥಿಯ ಮುಂದಿನ ಭವಿಷ್ಯವನ್ನು ನಿರ್ಧರಿಸಿ,ನಿಗದಿತ ಗುರಿಯನ್ನು ಮುಟ್ಟಲು ಬುನಾದಿಯಾಗಿರುತ್ತದೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವ ಹಾಗೂ ಆದ್ಯತೆಗಳನ್ನು ನೀಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಐ.ಟಿ.ಐ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ಜೊತೆಗೆ ಸ್ವ ಉದ್ಯೋಗ ಮಾಡಬಯಸುವವರಿಗೆ ಸರಕಾರದಿಂದ ಅನೇಕ ಸೌಲಭ್ಯಗಳು ಲಭ್ಯವಾಗಲಿದೆ.

ಎಸ್.ಎಸ್.ಎಸ್.ಎಲ್.ಸಿ .ಯಲ್ಲಿ ಕನಿಷ್ಠ ಅಥವಾ ಮಧ್ಯಮ ಅಂಕ ಪಡೆದು ಉತ್ತೀರ್ಣರಾದವರು / ಎಸ್.ಎಸ್.ಎಲ್.ಸಿ.ಯ ನಂತರ ಹೆಚ್ಚಿನ ವರ್ಷ ಓದಲು ಅನುಕೂಲವಿಲ್ಲದವರು/,ಪಿ.ಯು.ಸಿ.ಪಾಸ್/ಫೇಲ್ ಆಗಿ ಉದ್ಯೋಗಕ್ಕೆ ಪೂರಕವಾದ ತರಬೇತಿ ಪಡೆಯಲಿಚ್ಚಿಸುವವರು /ಉನ್ನತ ಮಟ್ಟದ ಶಿಕ್ಷಣ ಪೂರೈಸಲು ಸಾಧ್ಯವಿಲ್ಲದವರು ಹಾಗೂ ವೃತ್ತಿ ನೈಪುಣ್ಯತೆ ಪಡೆದು ಎಸ್.ಎಸ್.ಎಲ್. ಸಿ ನಂತರ ಕೇವಲ 1 ಅಥವಾ 2ವರ್ಷದ ಅವಧಿಯ ತರಬೇತಿ ಪಡೆದು ಉದ್ಯೋಗ ಬಯಸುವವರಿಗೆ ಅಥವಾ ಸ್ವ-ಉದ್ಯೋಗ ಮಾಡಬಯಸುವವರಿಗೆ ಐ.ಟಿ.ಐ. ಶಿಕ್ಷಣ ಉತ್ತಮ ಆಯ್ಕೆಯಾಗಿದೆ.

ಈ ನಿಟ್ಟಿನಲ್ಲಿ ಶಿರಸಿಯ ಪ್ರತಿಷ್ಠಿತ ಎಂ.ಇ.ಎಸ್. ಸಂಸ್ಥೆಯ ಎಂ.ಇ.ಎಸ್. ಖಾಸಗಿ ಐ.ಟಿ.ಐ. ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮತ್ತು ಸುಸಜ್ಜಿತ ಇಲೆಕ್ಟ್ರೀಷಿಯನ್ ,ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ಫಿಟ್ಟರ್ ವರ್ಕಷಾಪ್ ಗಳನ್ನು ಹೊಂದಿದ್ದು, ಎಸ್.ಎಸ್.ಎಲ್.ಸಿ.ಉತ್ತೀರ್ಣರಾದವರಿಗೆ ಎನ್.ಸಿ.ವಿ.ಟಿ.ಸಂಯೋಜನೆಗೆ ಒಳಪಟ್ಟ 2-ವರ್ಷದ ಇಲೆಕ್ಟ್ರೀಷಿಯನ್,ಇಲೆಕ್ಟ್ರಾನಿಕ್ಸ ಮೆಕ್ಯಾನಿಕ್ ಮತ್ತು ಫಿಟ್ಟರ್ ಕೋರ್ಸಗಳು ಲಭ್ಯವಿದೆ.

ಸುಸಜ್ಜಿತ ಕಂಪ್ಯೂಟರ್ ಲ್ಯಾಬ್,ಪರಿಣಿತ ಶಿಕ್ಷಕ ವೃಂದಗಳನ್ನು ಹೊಂದಿರುವ ಎಂ.ಇ.ಇಎಸ್.ಐ.ಟಿ.ಐ. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಕುರಿತು I.S.O 29990 : 2010 ಪ್ರಮಾಣಿಕರಿಸಲ್ಪಟ್ಟಿದೆ.

ನಿಗದಿತ ಪಠ್ಯಕ್ರಮದನುಸಾರ ಸಿದ್ದಪಡಿಸಿರುವ 3-ಡಿ ಇಲರ್ನಿಂಗ್ ಸಾಪ್ಟವೇರ್ ಮೂಲಕ ಎಲ್ಲ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸುವ ವ್ಯವಸ್ಥೆ ಲಭ್ಯವಿದ್ದು, ಐ.ಟಿ.ಐ. ತರಬೇತಿ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಉದೋಗಾವಕಾಶ ಕಲ್ಪಿಸಿ ಕೊಡಲು ಪ್ಲೇಸಮೆಂಟ್ ಸೆಲ್ ಹೊಂದಿದೆ. ಪ್ರತಿ ವರ್ಷ ಶೇ. 100ರಷ್ಟು ಉತ್ತಮ ಫಲಿತಾಂಶ ದಾಖಲಿಸುತ್ತಿದೆ.
ಐ.ಟಿ.ಐ. ಮಾಡಲು ಆಸಕ್ತರಿರುವ ಅಭ್ಯರ್ಥಿಗಳು ಶಿರಸಿಯ ಯಲ್ಲಾಪುರ ನಾಕಾ ಹತ್ತಿರ ವಿದ್ಯಾನಗರದಲ್ಲಿರುವ ಎಂ.ಇ.ಎಸ್.ಐ.ಟಿ.ಐ.ನಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಐ.ಟಿ.ಐ. ನಲ್ಲಿ ಇಂಜಿನಿಯರಿಂಗ್ (ಟೆಕ್ನಿಕಲ್) ಹಾಗೂ ನಾನ್ ಇಂಜಿನಿಯರಿಂಗ್‍ನ (ನಾನ್ ಟೆಕ್ನಿಕಲ್) ಅನೇಕ ಕೋರ್ಸುಗಳಿವೆ. ಐ.ಟಿ.ಐ. ನಲ್ಲಿ 6-ತಿಂಗಳಿಂದ ಹಿಡಿದು 2-ವರ್ಷದ ಅವಧಿಯ ವಿವಿಧ ಕೋರ್ಸುಗಳಿವೆ. ಇವುಗಳಲ್ಲಿ ಇಲೆಕ್ಟ್ರೀಷಿಯನ್ ,ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್,ಫಿಟ್ಟರ್, ಮಷಿನಿಷ್ಟ್,ಮೋಟಾರ ಮೆಕ್ಯಾನಿಕ್ ವೆಹಿಕಲ್,ಟರ್ನರ್, ವೆಲ್ಡರ್ ಹಾಗೂ ಇತ್ಯಾದಿ ಇವು ಹೆಚ್ಚಿನ ಉದ್ಯೋಗಾವಕಾಶವಿರುವ ಕೋರ್ಸುಗ ಳೆನ್ನಬಹುದು. ಐ.ಟಿ.ಯ. ಶಿಕ್ಷಣದಲ್ಲಿ ಶೇ.75 ಭಾಗ ಪ್ರಾಯೋಗಿಕ ಅಧ್ಯಯನವಿರುತ್ತದೆ.

ಕೈಗಾರಿಕಾ ವಲಯದ ವಿವಿಧ ವಿಷಯಗಳನ್ನು ಇದು ಒಳಗೊಂಡಿರುತ್ತದೆ. ಇಲ್ಲಿ ಪ್ರಾಯೋಗಿಕ ತರಬೇತಿಯೇ ಪ್ರಾಮುಖ್ಯವಾಗಿರುವುದರಿಂದ ಓದಿನಲ್ಲಿ ಸ್ವಲ್ಪ ಕೆಳಮಟ್ಟದಲ್ಲಿರುವ ವಿದ್ಯಾಥಿಗಳೂ ಕೂಡ ಪ್ರಾಯೋಗಿಕ ತರಬೆತಿಯಿಂದ ಸುಲಭವಾಗಿ ಅರ್ಥೈಸಿಕೊಂಡು ವೃತ್ತಿ ನೈಪುಣ್ಯತೆಹೊಂದಬಹುದಾಗಿದೆ. ಐ.ಟಿ.ಐ. ವೃತ್ತಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸರಕಾರಿ,ಅರೆಸರಕಾರಿ ಹಾಗೂ ಖಾಸಗಿ ಕೈಗಾರಿಕಾ ವಲಯಗಳಾದ ರೈಲ್ವೆ , ನೌಕಾನೆಲೆ, ಕೆ.ಎಸ್.ಆರ್.ಟಿ.ಸಿ.,ಕೆ.ಪಿ.ಟಿ.ಸಿ.ಎಲ್, ಮೆಟ್ರೋ,ಬಿ.ಎಚ್.ಇ.ಎಲ್.,ಎಚ್.ಎ.ಎಲ್.,ಇಸ್ರೋ,ಇನ್ಫೋಸಿಸ್, ವಿಪ್ರೋ,ಟೊಯೋಟಾ, ಟಾಟಾ ಮೋಟಾರ್ಸ, ಎ.ಬಿ.ಬಿ.,ಸ್ನೈಡರ್ ಇಲೆಕ್ಟ್ರಿಕಲ್ಸ್, ಹೊಂಡಾ, ಎಲ್ & ಟಿ,ಭಾಷ್ ಹಾಗೂ ವಿವಿಧ ಕೈಗಾರಿಕೆಗಳಲ್ಲಿ / ಎಂ.ಎನ್.ಸಿ. ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳಿವೆ. ಹೊರದೇಶಗಳಲ್ಲಿ ಕೂಡ ಅನೇಕ ಉದ್ಯೋಗಾವಕಾಶಗಳಿವೆ.

ವಿವಿದೆಡೆ ಉದ್ಯೋಗಾವಕಾಶಗಳು ಹಾಗೂ ಸ್ವ-ಉದ್ಯೋಗ ಮಾಡಬಯಸುವ ಅಭ್ಯರ್ಥಿಗಳಿಗೆ ಈ ವೃತ್ತಿ ತರಬೇತಿ ಸೂಕ್ತ ವೇದಿಕೆಯಾಗಿದ್ದು ಇಲೆಕ್ಟ್ರಿಕಲ್ ವೈರಮೆನ್/ವೆಲ್ಡರ್/ಟರ್ನರ್/ಫಾಬ್ರಿಕೇಟರ್/ಇಲೆಕ್ಟ್ರಿಕಲ್ ಉಪಕರಣಗಳ ರಿಪೇರಿಂಗ್ /ಇಲೆಕ್ಟ್ರಾನಿಕ್ಸ್ ಉಪಕರಣಗಳಾದ ಟಿ.ವಿ. ,ಮೊಬೈಲಗಳ ರಿಪೇರಿ, ಸೋಲಾರ್ ಅಳವಡಿಕೆ ಮತ್ತು ರಿಪೇರಿ ಹೀಗೆ ತರಬೇತಿ ಪೂರ್ಣಗೊಳಿಸಿದ ಬಳಿಕ ಸಂಬಂದಿತ ಕ್ಷೇತ್ರಗಳಲ್ಲಿ ವಿಫುಲ ಸ್ವ-ಉದ್ಯೋಗಾವಕಾಶಗಳಿವೆ.ಐ.ಟಿ.ಐ. ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸರಕಾರದಿಂದ ಮಾನ್ಯತೆ ಪಡೆದ ಸರಕಾರಿ / ಖಾಸಗಿ ಕೈಗಾರಿಕೆಗಳಲ್ಲಿ 1-ವರ್ಷ ಅವಧಿಯ ಅಪ್ರೆಂಟಿಷಿಪ್ ತರಬೇತಿಯನ್ನು ಪಡೆದು ಉನ್ನತ ಉದ್ಯೋಗಕ್ಕೆ ಸೇರಬಹುದಾಗಿದೆ: ಗಣೇಶ ಭಟ್ಟ ಎಂ.ಇ.ಎಸ್. ಐ.ಟಿ.ಐ. ಪ್ರಾಚಾರ್ಯರು.

====================================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading