ಅತೀ ವೇಗವಾಗಿ ಚಲಾಯಿಸಿಕೊಂಡುಬಂದ ಬುಲೆರೋ ವಾಹನವು ಬೈಕಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ತೋಟದಕಲ್ಲಳ್ಳಿ ಕ್ರಾಸ್ ಸಮೀಪ ನಡೆದಿದೆ.

ಆರೋಪಿ ಬುಲೆರೋ ವಾಹನದ ಚಾಲಕ, ಯಲ್ಲಾಪುರ ಪಟ್ಟಣದ ನೂತನನಗರದ ಕಾರ್ ಮೆಕ್ಯಾನಿಕ ವೃತ್ತಿಯ ಮಹಮ್ಮದ್ ಗಫೂರ್ ಶೇಖ್ ತನ್ನ ವಾಹನವನ್ನು ಉಮ್ಮಚಗಿ ಕಡೆಯಿಂದ ಭರತನಹಳ್ಳಿ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಭರತನಹಳ್ಳಿ ಕಡೆಯಿಂದ ಉಮ್ಮಚಗಿ ಕಡೆಗೆ ಹೋಗುತ್ತಿದ್ದ ಬೈಕಿಗೆ ಎದುರಿನಿಂದ ಡಿಕ್ಕಿಹೊಡೆದ ಪರಿಣಾಮ

ಶಿರಸಿ ತಾಲೂಕಿನ ಜಡ್ಡಿಗದ್ದೆಯ ಕೃಷ್ಣ ಬಾಬು ಸಿದ್ದಿ (64 ವರ್ಷ) ಹಾಗೂ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಸುನಂದಾ ಕೃಷ್ಣ ಸಿದ್ದಿ( 57 ವರ್ಷ) ಹಾಗೂ ಸಮನ್ವಿ ಅಣ್ಣಪ್ಪ ಸಿದ್ದಿ (4 ವರ್ಷ) ಅವರಿಗೆ ಗಾಯವಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣ ಸಿದ್ದಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬುಲೆರೋ ವಾಹನದ ಡಿಕ್ಕಿ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

==================

Leave a Reply

You cannot copy content of this page

Discover more from E - ಯಲ್ಲಾಪುರ

Subscribe now to keep reading and get access to the full archive.

Continue reading